ರಚ್ಚು,ಧ್ರವಾ ಫೈಟ್ ಅಲ್ಲಿ ಗೆದ್ದಿದ್ದು ಧ್ರುವಾ ಸರ್ಜಾ, ಯಾಕಂದ್ರೆ ಧ್ರುವಾ ಆಂಜನೇಯನ ಮಗ..!

‘ನನ್ನ ಮತ್ತು ಧ್ರುವ ನಡುವೆ ಯಾವಾಗಲೂ ಒಂದು ಸಣ್ಣ ಜಗಳ ಆಗುತ್ತಲೇ ಇರುತ್ತದೆ. ಆಂಜನೇಯನ ಬಗ್ಗೆ ನಮ್ಮಿಬ್ಬರಲ್ಲಿ ಹೆಚ್ಚು ಭಕ್ತಿ ಯಾರಿಗೆ ಇದೆ ಎಂಬ ವಿಷಯ ಇಟ್ಟುಕೊಂಡು ಫೈಟ್​ ಮಾಡುತ್ತೇವೆ. ಧ್ರುವ ಅವರೇ ಆಂಜನೇಯನ ಮಗ’ ಎಂದು ರಚಿತಾ ರಾಮ್​ ಹೇಳಿದ್ದಾರೆ.

‘ಲವ್ ಯೂ ರಚ್ಚು’ ಚಿತ್ರದ ಟ್ರೇಲರ್ ಲಾಂಚ್ ಗೆ ಅತಿಥಿಯಾಗಿ ಭಾಗವಹಿಸಿದ್ದ ಧ್ರುವಾ ಸರ್ಜಾ.., ನಟ ಧ್ರುವ ಸರ್ಜಾ ಅವರು ಆಂಜನೇಯನ ಪರಮ ಭಕ್ತ ಅನ್ನೋದು ತಿಳಿದಿರುವ ವಿಷಯ. ಅವರು ಸೋಶಿಯಲ್​ ಮೀಡಿಯಾದಲ್ಲಿ ಏನೇ ಪೋಸ್ಟ್​ ಮಾಡಿದರೂ ಅದರ ಜತೆಗೆ ‘ಜೈ ಆಂಜನೇಯ’ ಎನ್ನುವ ಜೈಕಾರ ಇದ್ದೇ ಇರುತ್ತದೆ. ಅವರ ಸಿನಿಮಾಗಳಲ್ಲೂ ಹನುಮನ ಪ್ರಸ್ತಾಪ ಇರುತ್ತದೆ. ಈ ವಿಚಾರದ ಬಗ್ಗೆ ಅವರು ರಚಿತಾ ರಾಮ್ ಜತೆ ಆಗಾಗ ಮಾತನಾಡುತ್ತಾರಂತೆ.

ರಚಿತಾ ಕೂಡ ಆಂಜನೇಯನ ಭಕ್ತೆ. ಅವರು ನಟಿಸಿರುವ ‘ಲವ್​ ಯೂ ರಚ್ಚು’ ಸಿನಿಮಾದ ಟ್ರೇಲರ್​ ರಿಲೀಸ್ ಕಾರ್ಯಕ್ರಮಕ್ಕೆ ಧ್ರುವ ನಿನ್ನೆ (ಡಿ.16) ಸರ್ಜಾ ಅತಿಥಿಯಾಗಿ ಬಂದಿದ್ದರು. ಧ್ರುವ ಬಗ್ಗೆ ರಚಿತಾ ಮನಸಾರೆ ಮಾತನಾಡಿದರು. ‘ನನ್ನ ಮತ್ತು ಧ್ರುವ ನಡುವೆ ಯಾವಾಗಲೂ ಒಂದು ಸಣ್ಣ ಜಗಳ ಆಗುತ್ತಲೇ ಇರುತ್ತದೆ. ಆಂಜನೇಯನ ಬಗ್ಗೆ ನಮ್ಮಿಬ್ಬರಲ್ಲಿ ಹೆಚ್ಚು ಭಕ್ತಿ ಯಾರಿಗೆ ಇದೆ ಎಂಬ ವಿಷಯ ಇಟ್ಟುಕೊಂಡು ಫೈಟ್​ ಮಾಡುತ್ತೇವೆ. ಧ್ರುವ ಅವರೇ ಆಂಜನೇಯನ ಮಗ’ ಎಂದು ರಚಿತಾ ರಾಮ್​ ಹೇಳಿದ್ದಾರೆ.

****

Exit mobile version