ಬೆಲ್ ಬಾಟಂ 2 – ದಿವಾಕರನ ಕಿವಿಗೆ ಚೆಂಡೂವ..!

ರಿಷಬ್ ಶೆಟ್ಟಿ ಮೊದಲ ಬಾರಿಗೆ ಹೀರೋ ಆಗಿ ಬಣ್ಣ ಹಚ್ಚಿದ ಸಿನೆಮಾ ಬೆಲ್ ಬಾಟಂ. ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಅಲೆ ಸೃಷ್ಟಿಸಿತ್ತು ಈ ಸಿನಿಮಾ ಕಮರ್ಷಿಯಲ್ ಆಗಿ ಸೂಪರ್ ಹಿಟ್ ಆಗಿತ್ತು. ಈಗ ಈ ಸಿನಿಮಾದ ಸೀಕ್ವೆಲ್ ಸೆಟ್ಟೇರಿದೆ.

ಸಂತೋಷ್ ಕುಮಾರ್ K.C ನಿರ್ಮಾಣ ಮಾಡಿ, ಜಯತೀರ್ಥ ನಿರ್ದೇಶನ ಮಾಡ್ತಿರೋ ಈ ಸಿನಿಮಾಕ್ಕೆ ಟಿ ಕೆ ದಯಾನಂದ್ ಮತ್ತೊಮ್ಮೆ ಕಥೆ ಬರಿತಾ ಇದ್ದಾರೆ. ಇದೀಗ ‘ದಿ ಕ್ಯೂರಿಯಸ್ ಕೇಸ್ ಆಫ್ ಚೆಂಡೂವ’ ಟೈಟಲ್ನಲ್ಲಿ ಸೀಕ್ವೆನ್ಸ್ ರೆಡಿಯಾಗಲಿದೆ.

ಇವತ್ತು ಬೆಳಿಗ್ಗೆ ಧರ್ಮಗಿರಿ ಶ್ರೀಮಂಜುನಾಥ  ದೇವಾಲಯದಲ್ಲಿ ಸಿನಿಮಾದ ಮುಹೂರ್ತ ನೆರವೇರಿತು. ಸಿನಿಮಾದ ಮೊದಲ ಸೀನ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡಿದ್ರು. ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ಬೆಲ್ ಬಾಟಮ್ ಸಿನಿಮಾಕ್ಕಿಂತ ಅದ್ಧೂರಿ ವೆಚ್ಚದಲ್ಲಿ ರೆಡಿ ಆಗ್ತಾ ಇದೆ ಬಲ್ ಬಾಟಂ-2.

ಬೆಲ್ ಬಾಟಂ ಸಿನಿಮಾದಲ್ಲಿ ದಿವಾಕರ್ ಗೆ ಒಬ್ರೇ ಹೀರೋಯಿನ್ ಅವ್ರೇ ಹರಿಪ್ರಿಯಾ. ಈಗ ಬೆಲ್ ಬಾಟಮ್ 20ನಲ್ಲಿ ಡಿಟೆಕ್ಟಿವ್ ದಿವಾಕರ್ ಗೆ ಇಬ್ಬರು ಹೀರೋಯಿನ್ ಒಬ್ಬರು ಹರಿಪ್ರಿಯಾ ಮತ್ತೊಬ್ಬರು ತಾನ್ಯ ಹೋಪ್.

ಬೆಲ್ ಬಾಟಮ್ ಸೀಕ್ವೆಲ್ ನಲ್ಲಿ ಡಿಟೆಕ್ಟಿವ್ ದಿವಾಕರನಿಗೆ ಪ್ರಮೋಷನ್ನಾಗಿ ಈಗ ಜೇಮ್ಸ್ ಬಾಂಡ್ ರೇಂಜ್ ಗೆ,  ಅದೇ ಸ್ಟೈಲ್ ನಲ್ಲಿ ಎಂಟ್ರಿ ಕೊಡ್ತಾ ಇದ್ದಾನೆ. ಈ ಸಿನ್ಮಾದಲ್ಲಿ ಡಿಟೆಕ್ಟಿವ್ ದಿವಾಕರನಿಗಾಗಿಯೇ ವಿಶೇಷ ಕಾರನ್ನೂ ಕೂಡ ರೆಡಿಮಾಡಲಾಗ್ತಿದೆ.

Exit mobile version