ತಿಂಗಳಿಗೂ ಮುಂಚೆ ಓ ಟಿ ಟಿ ಯಲ್ಲಿ ಕ್ರಾಂತಿ ಸಿನಿಮಾ

ಜನವರಿ 26 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ತೆರಿಗೆ ಬಂದಿತ್ತು… ರಾಜ್ಯಾದ್ಯಂತ ತೆರೆಕಂಡಂತ ಕ್ರಾಂತಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು… ರಿಲೀಸ್ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಗಳಿಸಿತ್ತು ಎಂದು ಚಿತ್ರತಂಡ ಅನೌನ್ಸ್ ಮಾಡಿದ್ರು ಕೂಡ ಕೆಲವರು ಸಿನಿಮಾದ ಕಲೆಕ್ಷನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು…. ಆದರೆ ಇದಕ್ಕೆಲ್ಲ ಕೇರ್ ಮಾಡಿದ ಕ್ರಾಂತಿ ತಂಡ ಸುದ್ದಿಗೋಷ್ಠಿ ಮಾಡುವ ಮೂಲಕ ಸಿನೆಮಾ 100 ಕೋಟಿ ಕಲೆಕ್ಷನ್ ದಾಟಿದೆ ಎಂದು ಅನೌನ್ಸ್ ಮಾಡಿದ್ದರು…

ಆದರೆ ವಿಚಿತ್ರ ಎನ್ನಿಸುವಂತೆ ಸಿನಿಮಾ ರಿಲೀಸ್ ಆದ 28 ದಿನಕ್ಕೆ ಓ ಟಿ ಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಆಗುತ್ತಿದೆ… ಫೆಬ್ರವರಿ 23ಕ್ಕೆ ಕ್ರಾಂತಿ ಸಿನಿಮಾ ಓ ಟಿ ಟಿ ಯಲ್ಲಿ ಬಿಡುಗಡೆ ಆಗಲಿದ್ದು ಏಕಕಾಲದಲ್ಲಿ ಹಿಂದಿ ತಮಿಳು ತೆಲುಗು ಮಲಯಾಳಂ ಭಾಷೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ ….ಆದರೆ ಹಿಂದಿಯಲ್ಲಿ ಮಾತ್ರ ಕ್ರಾಂತಿ ಸಿನಿಮಾ ರಿಲೀಸ್ ಆಗ್ತಿಲ್ಲ ಎಂಬುದನ್ನ ಅಮೆಜಾನ್ ಸಂಸ್ಥೆ ತಿಳಿಸಿದೆ…. ಬಾಲಿವುಡ್ ನಲ್ಲಿ ಡಬ್ ಆಗಿ ಬಿಡುಗಡೆಯಾಗುವಂತಹ ದರ್ಶನ್ ಅವರ ಸಿನಿಮಾ ಗೆ ಬಾರಿ ಡಿಮ್ಯಾಂಡ್ ಇದೆ… ಹಾಗಾಗಿ ಹಿಂದಿ ಸಿನಿಮಾದ ಸ್ಯಾಟಲೈಟ್ ರೈಟ್ಸ್ ಅನ್ನ ನೇರವಾಗಿ ಹಿಂದಿ ವಾಹಿನಿಗೆ ಮಾರಾಟ ಮಾಡಿದ್ದಾರೆ ನಿರ್ಮಾಪಕರು… ಹಾಗಾಗಿ ಓ ಟಿ ಟಿ ಯಲ್ಲಿ ನಾಲ್ಕು ಭಾಷೆಯಲ್ಲಿ ಮಾತ್ರ ತೆರೆ ಕಾಣಲಿದೆ… ಆದರೆ ಬಿಡುಗಡೆಯಾದ 28 ದಿನಕ್ಕೆ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳು ಥಿಯೇಟರ್ ನಲ್ಲಿ ಇನ್ನು ದಿನಗಳು ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ…

Exit mobile version