‘ಡಾರ್ಲಿಂಗ್ ಕೃಷ್ಣ’ ನಿಗೆ ಶುರುವಾಗಿದೆ ಹೊಸ ಸಂಕಟ..!

ನಟ ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಇತ್ತೀಚೆಗೆ ಪ್ರಕಟಿಸಿದ ವಿಡಿಯೋವೊಂದು ಭಾರೀ ವೈರಲ್ ಆಗಿದೆ.

ಪೊಸೆಸೀವ್ ನೆಸ್ ಬರಿ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇರತ್ತೆ, ನಾವು ಮಗೆಗಳಲ್ಲಿ ಮುದ್ದಾಗಿ ಸಾಕುವ ಸಾಕು ಪ್ರಾಣಿಗಳು ಮನುಷ್ಯನಿಗಿಂತ ಹೆಚ್ಚಾಗಿ ಹಚ್ಚಿಕೊಂಡಿರತ್ವೆ, ಕೆಲವೊಮ್ಮೆ ಅದರ ಪ್ರೀತಿ ಪಾತ್ರರು ಮನೆಯಲ್ಲಿ ಕಾಣಲಿಲ್ಲಾ ಎಂದರೆ ತಿಂಡಿ ಊಟ ಬಿಟ್ಟು ಮಂಕಾಗ್ಬಿಡತ್ವೆ. ಅದೇ ರೀತಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ದಂಪತಿಗಳ ಪ್ರೀತಿಯ ರೋಮಿಯೋ ಮಿಲನ ನಾಗರಾಜ್ ಅವರನ್ನು ತುಂಬ ಹಚ್ಚಿಕೊಂಡಿದೆ, ರೋಮಿಯೋ ನಿಂದ ಡಾರ್ಲಿಂಗ್ ಕೃಷ್ಣ ಎಷ್ಟೆಲ್ಲಾ ಕಷ್ಟಪಡಬೇಕಾಗಿ ಬಂದಿದೆ ಎಂಬುದನ್ನ ನೀವೆ ನೋಡಿ.

https://kannadapichhar.com/wp-content/uploads/2021/12/269999882_244510477765121_3113097101339777296_n.mp4
ತಮ್ಮ ಮುದ್ದಿನ ರೋಮಿಯೋ (ನಾಯಿ) ತಮಗೆ ಶತ್ರುವಾಗಿದೆ ಎಂದು ಡಾರ್ಲಿಂಗ್ ಕೃಷ್ಣ ತಮಾಷೆಯ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ. ತಮ್ಮ ಪತ್ನಿ ಮಿಲನಾ ನಾಗರಾಜ್ ಗೆ ಮುತ್ತು ಕೊಡಲು ಹೋದರೆ ರೋಮಿಯೋ ಅವರ ಮೈ ಮೇಲೆ ಹಾರಿ ಮುತ್ತು ಕೊಡಲೂ ಬಿಡಲ್ವಂತೆ. ಕೃಷ್ಣ ದಂಪತಿಯ ಈ ರೊಮ್ಯಾಂಟಿಕ್ ವಿಡಿಯೋಗೆ ಭಾರೀ ಲೈಕ್ಸ್ ಬಂದಿದೆ.

****

Exit mobile version