ರವಿಚಂದ್ರನ್‌ ಕಡೆಯಿಂದ ಡಬ್ಕಿಡಬಲ್‌ ಗಿಫ್ಟ್‌! ಒಂದೇ ವಾರದ ಗ್ಯಾಪ್‌ ನಲ್ಲಿ 2 ಸಿನಿಮಾ ರಿಲೀಸ್‌..!

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ ಸಿನಿಮಾ ಒಂದು ರಿಲೀಸ್‌ ಆಗಿ ಅದಾಗ್ಲೆ 2 ವರ್ಷ ಆಗಿತ್ತು. 2019ರಲ್ಲಿ ರವಿಚಂದ್ರನ್‌ ಅಭಿನಯದ ಆ ದೃಶ್ಯ ಬಳಿಕ ಅವ್ರ ಅಭಿನಯದ ಯಾವುದೇ ಸಿನಿಮಾ ರಿಲೀಸ್‌ ಆಗಿರ್ಲಿಲ್ಲ. ಕಳೆದ ವಾರ ರವಿಚಂದ್ರನ್‌ ಅಭಿನಯದ ಫ್ಯಾಮಿಲಿ ಥ್ರಿಲ್ಲರ್‌ `ದೃಶ್ಯ-2′ ರಿಲೀಸ್‌ ಆಗಿದೆ. ಸಿನಿಮಾಕ್ಕೆ ಈಗಾಗ್ಲೆ ಒಳ್ಳೆ ರೆಸ್ಪಾನ್ಸ್‌ ಕೂಡ ಸಿಕ್ಕಿದೆ. ಈ ಸಿನಿಮಾ ಬಳಿಕ ಒಂದೇ ವಾರದ ಗ್ಯಾಪ್‌ನಲ್ಲಿ ರವಿಚಂದ್ರನ್‌ ಅಭಿನಯದ ಮತ್ತೊಂದು ಸಿನಿಮಾ ಇಂದು ಅಂದ್ರೆ ಡಿ.17ಕ್ಕೆ ಜೀ-5ನಲ್ಲಿ ರಿಲೀಸ್‌ ಆಗ್ತಾ ಇದೆ. ಅದುವೆ `ಕನ್ನಡಿಗ’. ಒಂದು ಐತಿಹಾಸಿಕ ಕಥೆಯನ್ನಿಟ್ಟುಕೊಂಡು, ಮೈತ್ರಿ, ಜಟ್ಟ ಸಿನಿಮಾಗಳ ನಿರ್ದೇಶಕ ಬಿ.ಎಂ.ಗಿರಿರಾಜ್‌ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇಂಥಾ ಪಾತ್ರದಲ್ಲಿ ಹಿಂದೆಂದು ರವಿಚಂದ್ರನ್‌ ನಟಿಸಿರಲಿಲ್ಲ.

5 ವರ್ಷದ ನಂತ್ರ ಮತ್ತೆ ಹೀರೋ ಆಗಿ ತೆರೆಗೆ..!

2016ರಲ್ಲಿ ತೆರೆಕಂಡ ಅವ್ರದ್ದೇ ನಿರ್ದೇಶನದ ಅಪೂರ್ವ ಸಿನಿಮಾ ಬಳಿಕ ಮತ್ತೆ ರವಿಚಂದ್ರನ್‌ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರ್ಲಿಲ್ಲ, ಆದ್ರೆ ಈವರ್ಷ ರಿಲೀಸ್‌ ಆಗ್ತಾ ಇರೋ ಎರಡೂ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪೋಷಕ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ತಾ ಇದ್ದಕ್ರೇಜಿಸ್ಟಾರ್‌, 5 ವರ್ಷಗಳ ಬಳಿಕ ಹೀರೋ ಆಗಿ ನಟಿಸಿರೋ 2 ಸಿನಿಮಾಗಳು ತೆರೆಗೆ ಬರ್ತಾ ಇವೆ. ಎರಡೂ ಸಿನಿಮಾಗಳಲ್ಲೂ ರವಿಚಂದ್ರನ್‌ ಅಭಿಮಾನಿಗಳು ಬಯಸುವ ರೊಮ್ಯಾಂಟಿಕ್‌ ಸೀನ್‌ಗಳು ಹೆಚ್ಚು ಇರದೇ ಇದ್ದರೂ ಸಿನಿಮಾದ ನಾಯಕ ನಟರಾಗಿ ರವಿಚಂದ್ರಿನ್‌ ಕಾಣಿಸಿಕೊಳ್ತಾ ಇರೋದು ರವಿಮಾಮನ ಅಭಿಮಾನಿಗಳಿಗೆ ಖುಷಿ ನೀಡಿದೆ.

****

Exit mobile version