ನಾಯಂಡಹಳ್ಳಿ ರಸ್ತೆಗೆ ಹೆಸರು.. ಅಂಬಿ-ಅಪ್ಪು ಫ್ಯಾನ್ಸ್‌ ಮಧ್ಯೆ Cold War

ನಾಯಂಡಹಳ್ಳಿ ಇಂದ ಬನ್ನೇರುಘಟ್ಟಕ್ಕೆ ಹೋಗುವ ಮಾರ್ಗಕ್ಕೆ ರೆಬೆಲ್‌ ಸ್ಟಾರ್‌ ಅಂಬರೀಸ ಹೆಸರಿಡುವಂತೆ ಅಂಬಿ ಅಭಿಮಾನಿಗಳು ಮನವಿ ಮಾಡಿದ್ದಾರೆ. ಈಗಾಗಲೇ ನಾಯಂಡಳ್ಳಿಯಿಂದ ಬನ್ನೇರುಘಟ್ಟ ರಸ್ತೆಗೆ ಪುನೀತ್ ಹೆಸರಿಡೋದಾಗಿ ಬಿಬಿಎಂಪಿ ಘೋಷಿಸಿತ್ತು. ಆದ್ರೀಗ ಅಂಬರೀಶ್‌ ಅಭಿಮಾನಿಗಳು ಈ ರಸ್ತೆಗೆ ಮಂಡ್ಯದ ಗಂಡಿನ ಹೆಸರಿಡಲು ಒತ್ತಾಯಿಸಿದೆ. ಅಪ್ಪು ಅಂಬರೀಶ್ ಅವರನ್ನ ಮಾಮ‌ ಅಂತಲೇ ಕರೆಯುತ್ತಿದ್ರು, ಜೊತೆಯಲ್ಲೇ ಸಿನಿಮಾ ಕೂಡ ಮಾಡಿದ್ರು. ಇಬ್ಬರ ನಡುವೆ ಒಂದು ಆತ್ಮೀಯ ಒಡನಾಟವಿತ್ತು.

https://kannadapichhar.com/wp-content/uploads/2022/01/WhatsApp-Video-2022-01-25-at-12.35.32-PM.mp4
ಅಂಬಿ ಅಭಿಮಾನಿಗಳಿಂದ ಬಿಬಿಎಂಪಿಗೆ ಮನವಿ

ಅಂಬರೀಶ್ ಕುಟುಂಬ ಹಾಗೂ ಅಣ್ಣಾವ್ರ ಕುಟುಂಬದ ನಡುವೆ ಬಿಡಿಸಲಾಗದ ಬಂಧವಿದೆ. ಆದ್ರೀಗ ನಾಯಂಡಹಳ್ಳಯಿಂದ ಬನ್ನೇರುಘಟಕ್ಕೆ ಸಾಗುವ ದಾರಿಗೆ ಅಪ್ಪು ಹೆಸರಿಡಬೇಕೋ.. ಇಲ್ಲ ಅಂಬಿ ಹೆಸರಿಡಬೇಕೋ ಅನ್ನೋ ವಿಚಾರವಾಗಿ ಅಭಿಮಾನಿಗಳ ನಡುವೆ ಸಣ್ಣದೊಂದು ಭಿನ್ನಾಭಿಪ್ರಾಯ ಮೂಡಿದೆ. ಈ ವಿಷಯವಾಗಿ ಇವತ್ತು ಬೆಳಗ್ಗೆ 11 ಘಂಟೆಗೆ ಬಿಬಿಎಂಪಿಗೆ ಆಗಮಿಸಿ ಅಂಬರೀಶ್ ಸಂಘಟನೆಗಳು ಮನವಿ ಮಾಡಿದ್ದಾರೆ. ಎರಡೂ ಅಭಿಮಾನಿಗಳ ಸಂಘಕ್ಕೆ ಇದೀಗ ಪ್ರತಿಷ್ಟೆಯ ವಿಷಯವಾಗಿ ಬದಲಾಗ್ತಾ ಇದೆ. ಇದಕ್ಕೆ ಬಿಬಿಎಂಪಿ ಹೇಗೆ ಪ್ರತಿಕ್ರಿಯಸಲಿದೆ ಕಾದು ನೋಡಬೇಕು.

ನಾಯಂಡಹಳ್ಳಿ-ಬನ್ನೇರುಘಟ್ಟ ರಸ್ತೆ
Exit mobile version