ಚಿರಂಜೀವಿ ಸರ್ಜಾರ ಸುಪುತ್ರ ರಾಯನ್ ರಾಜ್ ನಾಮಕರಣದ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ ನಟಿ ಮೇಘನಾ ರಾಜ್ ಭಾವುಕರಾಗಿ ಮಾತನಾಡಿದ್ದಾರೆ.

ಜ್ಯು. ಚಿರುಗೆ ಏನು ಹೆಸರಿಡಬೇಕು ಅಂತ ಗೊತ್ತಿರಲಿಲ್ಲ. ನಮ್ಮ ಜೀವನದಲ್ಲಿ ಕತ್ತಲೆ ತುಂಬಿತ್ತು. ಇದೀಗ ಮಗನ ರೂಪದಲ್ಲಿ ಚಿರು ಮರಳಿ ಬಂದಿದ್ದು ಹೊಸ ಬೆಳಕಿನ ನಿರೀಕ್ಷೆ ಹುಟ್ಟಿಕೊಂಡಿದೆ. ಭರವಸೆ ಹುಟ್ಟಿಕೊಂಡಿದೆ. ರಾಯನ್ ಹೆಸರು ಹೇಗಾನಿಸ್ತಿದೆ..? ರಾಯನ್ ನಮಗೆ ಸ್ವರ್ಗದ ಬಾಗಿಲು ತೆಗೆಸಿದ್ದಾನೆ.ನಮಗೆ ಖುಷಿ ಕೊಟ್ಟಿದ್ದಾನೆ. ನಿಮ್ಮೆಲ್ಲರಿಗೂ ಥ್ಯಾಂಕ್ಸ್ ಹೇಳ್ತಿನಿ. ಎಂದು ಮಗನ ಹೆಸರನ್ನ ಕುಟುಂಬದ ಜೊತೆಗೆ ಅಭಿಮಾನಿಗಳಿಗೆ ತಲುಪಿಸಿದ್ದಾರೆ.