ಬೈಟು ಲವ್‌ ಸಿನಿಮಾಕ್ಕೆ 3 ಸಂತೋಷಂ ಅವಾರ್ಡ್‌..!

ಈ ವರ್ಷ ಫೆಬ್ರವರಿಯಲ್ಲಿ ರಿಲೀಸ್‌ ಆದ ಹರಿ ಸಂತೂ ಆಕ್ಷನ್‌ ಕಟ್‌ ಹೇಳಿ, ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ ಬೈಟು ಲವ್‌ಗೆ ಈಗ 3 ಅವಾರ್ಡ್‌ ಬಂದಿದೆ. ಪ್ರತಿಷ್ಟಿತ ಸಂತೋಷಂ ಸೌತ್‌ ಇಂಡಿಯನ್‌ ಸಿನಿಮಾ ಅವಾರ್ಡ್ಸ್‌ 2022ನೇ ಸಾಲಿನ 3 ಅವಾರ್ಡ್‌ಗಳನ್ನ ತನ್ನದಾಗಿಸಿಕೊಂಡಿದೆ. ನಿರ್ದೇಶಕ ಹರಿಸಂತೂ ಬೆಸ್ಟ್‌ ಡೈರೆಕ್ಟರ್‌, ಶಿವರಾಜ್‌ ಕೆ.ಆರ್‌ ಪೇಟೆ ಅತ್ಯುತ್ತಮ ಪೋಷಕ ನಟ ಹಾಗೂ ನವೀನ್‌ ಸಜ್ಜು ಹಾಡಿದ ಫ್ರಸ್ಟ್ರೇಷನ್‌ ಹಾಡಿಗೆ ಅತ್ಯುತ್ತಮ ಹಿನ್ನಲೆ ಗಾಯಕ ಅವಾರ್ಡ್‌ ತಮ್ಮದಾಗಿಸಿಕೊಂಡಿದ್ದಾರೆ.

YouTube player

ಧನ್ವೀರ್‌ ಹಾಗೂ ಶ್ರೀಲೀಲಾ ಲೀಡ್‌ನಲ್ಲಿ ಕಾಣಿಸಿಕೊಂಡಿದ್ದ ಸಿನಿಮಾದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಮ್ಯೂಸಿಕ್‌ ಕಂಪೋಸ್‌ ಮಾಡಿದ್ರು, ಈ ಹಾಡುಗಳು ಹಿಟ್‌ ಅಗಿದ್ದವು, ಸಿನಿಮಾ ಕೂಡ ಜನರ ಮೆಚ್ಚುಗೆ ಗಳಿಸಿತ್ತು. ಈಗ ಸಿನಿಮಾಕ್ಕೆ ಸಂತೋಷಂ ಅವಾರ್ಡ್‌ ಬಂದಿರೋದು ಸಿನಿಮಾದ ಸಂತೋಷ ದುಪ್ಪಟ್ಟು ಮಾಡಿದೆ.

Exit mobile version