ಹಾವು ಕಡಿತಕ್ಕೆ ಚಿಕಿತ್ಸೆ ಪಡೆದು ಮನೆಗೆ ಮರಳಿದ ಸಲ್ಲು!

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಪನ್ವೇಲ್ ಬಳಿಯ ತಮ್ಮ ಫಾರ್ಮ್‍ಹೌಸ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹಾವು ಕಚ್ಚಿದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಶನಿವಾರ ರಾತ್ರಿ ಫಾರ್ಮ್‍ಹೌಸ್‍ನಲ್ಲಿ ಸಲ್ಲುಗೆ ಹಾವು ಕಚ್ಚಿತ್ತು. ನಂತರ ಅವರು ನವಿ ಮುಂಬೈನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದರು. ಭಾನುವಾರ ಬೆಳಗ್ಗೆ ಅವರು ಡಿಸ್ಚಾರ್ಜ್ ಆಗಿದ್ದರು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಸಲ್ಮಾನ್ ಫಾರ್ಮ್‍ಹೌಸ್‍ಗೆ ಹಿಂತಿರುಗಿ ರಾತ್ರಿ ತಮ್ಮ 56 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಲ್ಲು ಯಾವಾಗಲೂ ತನ್ನ ಹುಟ್ಟುಹಬ್ಬವನ್ನು ಮುಂಬೈನ ಹೊರವಲಯದಲ್ಲಿರುವ ತಮ್ಮ ಫಾರ್ಮ್‍ಹೌಸ್‍ನಲ್ಲಿ ಕುಟುಂಬ ಮತ್ತು ಆಪ್ತರೊಂದಿಗೆ ಆಚರಿಸಿಕೊಳ್ಳುತ್ತಾರೆ.

https://kannadapichhar.com/wp-content/uploads/2021/12/10000000_497742844933593_5633166495732098577_n.mp4

ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಫಾರ್ಮ್‍ಹೌಸ್ ನಿಂದ ಹೊರಗೆ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರ ನನ್ನ ಫಾರ್ಮ್‍ಹೌಸ್‍ಗೆ ಹಾವೊಂದು ಪ್ರವೇಶಿಸಿತು. ಅದನ್ನು ನಾನು ಕೋಲಿನಿಂದ ಹೊರಗೆ ಹಾಕಲು ಪ್ರಯತ್ನಿಸಿದೆ. ಆದರೂ ಅದು ನನ್ನ ಕೈ ಬಳಿ ಬಂದಿತ್ತು. ಈ ವೇಳೆ ನನಗೆ ಮೂರು ಬಾರಿ ಕಚ್ಚಿತು. ಅದು ಒಂದು ರೀತಿಯ ವಿಷಪೂರಿತ ಹಾವು ಆಗಿತ್ತು. ಈ ಪರಿಣಾಮ ನಾನು 6 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಆದರೆ ಈಗ ನಾನು ಚೆನ್ನಾಗಿದ್ದೇನೆ ಎಂದು ತಿಳಿಸಿದರು.

****

Exit mobile version