ರಚಿತಾ ಬಂದಿದ್ದಾರೆ ಅಂದ್ರು ಅದಕೋಸ್ಕರ ಬಂದೆ ಲೂಸ್ ಮಾದ ಯೋಗಿ!

ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಇದೆ 24 ರಂದು ಕ್ರಿಸ್ಮಸ್ ಗೆ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಚಿತ್ರದ ಪ್ರಿ ರಿಲೀಸ್ ಇವೆಂಟ್ ನಿನ್ನೆ (ಡಿ.19) ನಡೆದಿದ್ದು ಬಡವ ರಾಸ್ಕಲ್ ಚಿತ್ರಕ್ಕೆ ಕನ್ನಡ ಚಿತ್ರರಂಗದ ಪ್ರಮುಖರು ಹಾಗು ಡಾಲಿ ಧನಂಜಯ್ ಅವರ ಗೆಳೆಯರ ಬಳಗ ಸಾಥ್ ನೀಡಿದೆ.

ಪ್ರಿ ರಿಲೀಸ್ ಇವೆಂಟ್ ಗೆ ಧನು ಗೆಳೆಯ ಲೂಸ್ ಮಾದ ಯೋಗಿ ಕೂಡ ಭಾಗವಹಿಸಿ ಮಾತನಾಡಿದ್ರು, ಎಲ್ಲರು ಮಾತನಾಡುವಾಗ ನಾನು ಡಾಲಿ ಧನಂಜಯ್ ಪ್ರೆಂಡ್ ಶಿಪ್ ಗೋಸ್ಕರ ಬಂದಿದ್ದೀನಿ ಎನ್ನುತ್ತಿದ್ದಾರೆ, ರಚಿತಾ ಬರ್ತಾರೆ ಅಂದ್ರ ಅದಕ್ಕೆ ನಾನು ರಚಿತಾ ರಾಮ್ ಗೋಸ್ಕರ ಬಂದಿದ್ದೀನಿ ಎಂದು ಹೇಳುವ ಮೂಲಕ ಎಲ್ಲರನ್ನು ನಗುವಂತೆ ಮಾಡಿದ್ರು, ಅಲ್ಲಿ ನೋಡಿ ನಮ್ಮ ಹುಡುಗ್ರು ಬಂದವ್ರೆ ಅವ್ರು ಕೂಡ ರಚಿತಾ ರಾಮ್ ಅವರನ್ನ ನೋಡ್ಬೇಕು ಅಂತಿದ್ರು, ನೋಡ್ಕೊಂಡ್ ಬಿಡ್ರೋ ಎಲ್ರು ಎಂದು ಹಾಸ್ಯ ಚಟಾಕಿ ಹಾರಿಸಿದ್ರು ಯೋಗಿ.

 ‘ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಹೀರೋ ಆಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಕಾಣಿಸಿಕೊಂಡಿದ್ದಾರೆ.  ಧನಂಜಯ ಈ ಸಿನಿಮಾದಲ್ಲಿ ಆಟೋ ಓಡಿಸೋ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕ ಗೆಳೆಯರಿಗಾಗಿ ಏನು ಮಾಡೋಕೂ ರೆಡಿ ಇರುತ್ತಾನೆ. ಇದು ಆತನನ್ನು ಪ್ರೀತಿಸುವ ಹುಡುಗಿಗೆ ಇಷ್ಟವಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗುತ್ತದೆ. ಇನ್ನು, ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳು ಇರಲಿವೆ ಎಂಬುದು ಟ್ರೇಲರ್​​​ನಲ್ಲಿ ಹೈಲೈಟ್​ ಆಗಿದೆ.

****

Exit mobile version