‘ಬಡವ ರಾಸ್ಕಲ್’ ಸೀಕ್ರೆಟ್ ಬಿಚ್ಚಿಟ್ಟ ಡಾಲಿ!

ಡಾಲಿ ಧನಂಜಯ​ ಅವರು ನಟನೆಯ ಬಡವ ರಾಸ್ಕಲ್ ಚಿತ್ರ ರಾಜ್ಯದಲ್ಲಿ ಈಗಾಗಲೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಇಂದು (ಡಿ.13) ಟ್ರೈಲರ್ ಲಾಂಚ್ ಮಾಡಲಾಗಿದೆ. ಧನಂಜಯ್ ನಟನೆಗಷ್ಟೆ ಸೀಮಿತವಾಗದೆ ಜೊತೆ  ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ‘ಬಡವ ರಾಸ್ಕಲ್​’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಕ್ರಿಸ್​ಮಸ್​ ಪ್ರಯುಕ್ತ ಡಿಸೆಂಬರ್​ 24ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆದಿದ್ದು ಚಿತ್ರದ ಸೀಕ್ರೇಟ್ ಬಿಟ್ಟುಕೊಟ್ಟಿದ್ದಾರೆ ಡಾಲಿ ಧನಂಜಯ್.

YouTube player

ಅತಿ ಸಾಮಾನ್ಯ ಜನರ ಕಥೆಯಿರುವ ‘ಬಡವ ರಾಸ್ಕಲ್‌’ ಸಿನಿಮಾ ಈಗಾಗಲೇ ತನ್ನ ವಿಶಿಷ್ಟವಾದ ಪ್ರಚಾರದಿಂದ ಗಮನ ಸೆಳೆದಿದೆ. ಇದರಲ್ಲಿ ನಟ ಧನಂಜಯ ಕೂಡ ಮಧ್ಯಮ ವರ್ಗದವರನ್ನು ಪ್ರತಿನಿಧಿಸುವ ಪಾತ್ರದಲ್ಲಿದ್ದಾರೆ. ಇದೇ ರೀತಿ ಈ ಸಿನಿಮಾ ನಿರ್ದೇಶನ ಮಾಡಿರುವ ಶಂಕರ್‌ ಗುರು ಈ ಹಿಂದೆ ಕೊರಿಯರ್‌ ಬಾಯ್‌ ಆಗಿ ಕೆಲಸ ಮಾಡಿದವರು ಎಂದು ನಿರ್ದೇಶಕರ ಲೈಫ್ ಜರ್ನಿ ತಿಳಿಸಿದರು ಡಾಲಿ

ಹೌದು, ‘ಬಡವ ರಾಸ್ಕಲ್‌’ ಸಿನಿಮಾ ನಿರ್ದೇಶಕ ಶಂಕರ್‌ ಗುರು ಅವರು ಬೆಂಗಳೂರಿನ ಶ್ರೀನಗರದಲ್ಲಿ ಕೊರಿಯರ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದರು. ಇದರೊಂದಿಗೆ ಸಂಜೆ ಕಾಲೇಜಿನಲ್ಲಿ ಓದುತ್ತಾ ಸಿನಿಮಾ ಕನಸು ಕಾಣುತ್ತಿದ್ದ ಅವರು ನಂತರ ಸೇರಿದ್ದು ‘ಮಠ’ ಸಿನಿಮಾ ಖ್ಯಾತಿಯ ಗುರುಪ್ರಸಾದ್‌ ತಂಡಕ್ಕೆ. ಅವರು ‘ಎದ್ದೇಳು ಮಂಜುನಾಥ’ ಸಿನಿಮಾ ಮಾಡುತ್ತಿದ್ದ ಸಮಯದಲ್ಲಿ ಸಹ ನಿರ್ದೇಶಕರಾಗಿ ಸೇರಿಕೊಂಡ ಶಂಕರ್‌ ಅನೇಕ ವರ್ಷಗಳ ಕಾಲ ಗುರುಪ್ರಸಾದ್‌ ಜತೆಗೆ ಕೆಲಸ ಮಾಡಿದ್ದಾರೆ.

‘ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ. ಈ ಚಿತ್ರವನ್ನು ಕೆಆರ್​ಜಿ ಸ್ಟೂಡಿಯೋಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ.

Exit mobile version