Site icon Kannada Pichchar

‘ಬಡವ ರಾಸ್ಕಲ್’ ಟೈಟಲ್ ಸಾಂಗ್ ರಿಲೀಸ್!

ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರದ ಟೈಟಲ್ ಟ್ಯ್ರಾಕ್ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ ನಲ್ಲಿ ರಿಲೀಸ್ ಆಗಿದ್ದು, ಲಿರಿಕಲ್ ಟ್ರ್ಯಾಕ್ ನಲ್ಲಿ ಸಖತ್ ಆಗಿ ಮೂಡಿಬಂದಿದೆ.

ಡಾಲಿ ಧನಂಜಯ್ ಅಭಿನಯದ  ‘ಬಡವ ರಾಸ್ಕಲ್’ ಚಿತ್ರದ ‘ಆಗಾಗ ನೆನಪಾಗುತಾಳೆ’ ಸಂಗೀತ ಪ್ರೀಯರಿಗೆ ಹೆಚ್ಚು ಹಿಡಿಸಿತು. ಚಿತ್ರದ ‘ಉಡುಪಿ ಹೋಟೆಲು’ ಹಾಡು ಕೂಡ ಸಿನಿ ಪ್ರೇಮಿಗಳ ಮನಗೆದ್ದಿದೆ. ಬಡವಾ ರಾಸ್ಕಲ್ ಚಿತ್ರದಲ್ಲಿ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಸಿನಿ ರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಡವಾ ರಾಸ್ಕಲ್ ಟೈಟಲ್ ಸಾಂಗ್ ಗ್ಲಿಂಪ್ಸ್ ಅಲ್ಲಲ್ಲಿ ಕೇಳಿ ಬರುತ್ತಿತ್ತು ಹಾಗಾಗಿ ಟೈಟಲ್ ಟ್ರ್ಯಾಕ್ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಸಂಜಿತ್ ಹೆಗ್ಡೆ ದ್ವನಿಯಲ್ಲಿ, ಚೇತನ್ ಕುಮಾರ್ (ಭರ್ಜರಿ) ಸಾಹಿತ್ಯ ರಚಿಸಿದ್ದು ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ.

ಬಡವ ರಾಸ್ಕಲ್ ಚಿತ್ರದಲ್ಲಿ ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸಿದ್ದು ನಾಗಭೂಷಣ್, ಪೂರ್ಣಚಂದ್ರ ಮೈಸೂರು, ತಾರಾ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಅವರ ಸಂಗೀತ ಮತ್ತು ಪ್ರೀತಾ ಜಯರಾಮ್ ಅವರ ಛಾಯಾಗ್ರಹಣವಿದೆ.

****

Exit mobile version