News

ಹಾಸನದಲ್ಲಿ ಅಭಿಮಾನಿಗಳ ಅದ್ದೂರಿ ಆತಿಥ್ಯ ಸ್ವೀಕರಿಸಿದ ‘ಬಡವಾ ರಾಸ್ಕಲ್’

ಹಾಸನದಲ್ಲಿ ಅಭಿಮಾನಿಗಳ ಅದ್ದೂರಿ ಆತಿಥ್ಯ ಸ್ವೀಕರಿಸಿದ ‘ಬಡವಾ ರಾಸ್ಕಲ್’
  • PublishedDecember 30, 2021

ಡಾಲಿ ಧನಂಜಯ್ ತವರು ಜಿಲ್ಲೆ ಹಾಸನಕ್ಕೆ  ನೆನ್ನೆ (ಡಿ.29) ಬಡವ ರಾಸ್ಕಲ್ ಚಿತ್ರ ತಂಡ ಭೇಟಿ ನೀಡಿದೆ. ಅಭಿಮಾನಿಗಳು ಇಡೀ ತಂಡಕ್ಕೆ ಭವ್ಯ ಸ್ವಾಗತ ನೀಡಿದ್ದಾರೆ.

‘ಡಾಲಿ’ ಧನಂಜಯ ನಟನೆಯ ‘ಬಡವ ರಾಸ್ಕಲ್​’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಪಂಚಿಂಗ್​ ಡೈಲಾಗ್​ಗಳು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಧನಂಜಯ ಅವರು ಮೊದಲ ನಿರ್ಮಾಣದಲ್ಲೇ ಗೆದ್ದಿದ್ದಾರೆ. ಪಕ್ಕದಮನೆ ಹುಡುಗನಾಗಿ ಅವರನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಈ ಕಾರಣಕ್ಕೆ ನೆನ್ನೆ (ಡಿಸೆಂಬರ್​ 29) ‘ಬಡವ ರಾಸ್ಕಲ್’ ತಂಡ ಹಾಸನ ಜಿಲ್ಲೆಗೆ ಭೇಟಿ ನೀಡಿತ್ತು. ನಟ ಡಾಲಿ ಧನಂಜಯ ಅವರನ್ನು ಕಂಡು ಅಭಿಮಾನಿಗಳು ಖುಷಿಪಟ್ಟರು. ಅಲ್ಲದೆ,  ನೆಚ್ಚಿನ ನಟನ ಸೆಲ್ಫಿಗೆ ಮುಗಿಬಿದ್ದಿದ್ದರು. ಕೆಲವರು ಆಟೋಗ್ರಾಫ್​ ಹಾಕಿಸಿಕೊಳ್ಳೋಕೂ ಮುಂದೆ ಬಂದರು. ಅದರ ವಿಡಿಯೋ ಇಲ್ಲಿದೆ.

ಮುಖ್ಯ ಪಾತ್ರವನ್ನೂ ನಿಭಾಯಿಸಿರುವ ಧನಂಜಯ್​ಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್​ ನಟಿಸಿದ್ದಾರೆ. ವಾಸುಕಿ ವೈಭವ್​ ಸಂಗೀತ ನಿರ್ದೇಶನ, ಪ್ರೀತಾ ಜಯರಾಮನ್​ ಛಾಯಾಗ್ರಹಣ ಮಾಡಿದ್ದಾರೆ. ಪೋಷಕ ಪಾತ್ರಗಳಲ್ಲಿ ನಾಗ ಭೂಷಣ್​, ರಂಗಾಯಣ ರಘು, ತಾರಾ ಅನುರಾಧ ಹೈಲೈಟ್​ ಆಗಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *