ಡಾಲಿ ಧನಂಜಯ ಅಭಿನಯದ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿ, ವಾರ್ಷಾರಂಭದಲ್ಲಿ ಸೂಪರ್ ಸಕ್ಸಸ್ ಕಂಡ ಸಿನಿಮಾ ಬಡವ ರಾಸ್ಕಲ್ ತೆಲುಗಿನಲ್ಲಿ ರಿಲೀಸ್ ಆಗಲು ತಯಾರಿ ನಡೆಸ್ತಾ ಇದೆ. ಈಗಾಗ್ಲೆ ಬಡವ ರಾಸ್ಕಲ್ ಸಿನಿಮಾದ ಹಾಡುಗಳು ತೆಲುಗಿನಲ್ಲಿ ರಿಲೀಶ್ ಆಗಿ ಅಲ್ಲೂ ಕೂಡ ಪಾಪ್ಯುಲರ್ ಆಗಿದ್ವು, ಈಗ ಸಿನಿಮಾದ ಟೀಸರ್ ಕೂಡ ತೆಲುಗಿನಲ್ಲಿ ರಿಲೀಸ್ ಆಗಿದೆ. ಟೀಸರ್‌ಗೂ ತೆಲುಗು ಸಿನಿಪ್ರೇಮಿಗಳಿಂದ ಒಳ್ಳೆ ರೆಸ್ಪಾನ್ಸ್ ಸಿಗ್ತಾ ಇದೆ.
ಬಡವ ರಾಸ್ಕಲ್ ಕನ್ನಡದಲ್ಲಿ ರಿಲೀಸ್ ಅಗಿ ೭ ವಾರವಾದ್ರು ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣ್ತಾ ಇದೆ. ಥಿಯೇಟರ್ ೫೦:೫೦ ಇದ್ದಾಗ್ಲೇ ಹೌಸ್ ಫುಲ್ ಆಗ್ತಾ ಇದ್ದ ಸಿನಿಮಾ ಈಗ ಥಿಯೇಟರ್ ಸಂಪೂರ್ಣವಾಗಿ ಓಪನ್ ಆಗ್ತಾ ಇದ್ದು, ಮತ್ತಷ್ಟು ಜನರನ್ನ ಥಿಯೇಟರ್‌ನತ್ತ ಸೆಳೀತಾ ಇದೆ. ಕನ್ನಡದ ಈ ಸೂಒರ್ ಹಿಟ್ ಸಿನಿಮಾ ತೆಲುಗಿಗೆ ಡಬ್ ಆಗಿ ಹೋಗ್ತಾ ಇದ್ದು, ಡಾಲಿ ಕೂಡ ಟಾಲಿವುಡ್ ಸಿನಿರಸಿಕರಿಗೆ ಚಿರಪರಿಚಿತರಾಗಿರೋದ್ರಿಂದ, ಅಲ್ಲೂ ಕೂಡ ಬಡವ ರಾಸ್ಕಲ್ ಕಮಾಲ್ ಮಾಡೋದ್ರಲ್ಲಿ ಅನುಮಾನವಿಲ್ಲ.