50:50 ಇದ್ರೂ, 6ನೇ ವಾರವೂ `ಬಡವ ರಾಸ್ಕಲ್‌’ ಹೌಸ್‌ಫುಲ್‌..!

ಡಾಲಿ ಧನಂಜಯ ಅಭಿನಯಿಸಿ, ಮೊದಲ ಬಾರಿಗೆ ನಿರ್ಮಾಣ ಮಾಡಿರೋ ಕಳೆದ ವರ್ಷಾಂತ್ಯ ರಿಲೀಸ್‌ ಆದ ವರ್ಷದ ಬ್ಲಾಕ್‌ ಬಸ್ಟರ್‌ ಸಿನಿಮಾ ಬಡವ ರಾಸ್ಕಲ್‌. ಸದ್ಯ 6ನೇ ವಾರದ ಪ್ರದರ್ಶನ ಕಾಣ್ತಾ ಇದೆ. ಆರನೇ ವಾರವೂ ಸಿನಿಮಾ ಹೌಸ್‌ಫುಲ್‌ ಆಗಿದೆ. ಕೋವಿಡ್‌ ನಿಂದಾಗಿ ಥಿಯೇಟರ್‌ಗಳು ಕೇವಲ ಅರ್ಧ ಮಾತ್ರ ಭರ್ತಿ ಮಾಡಲು ಅವಕಾಶ ಇದ್ರು, ಸಿನಿಮಾ ರಸಿಕರು ಸಿನಿಮಾ ನೋಡ್ತಾ ಇದ್ದಾರೆ. ಸಿನಿಮಾ ಚೆನ್ನಾಗಿದ್ರೆ 50:50 ಸೀಟಿನ ಭರ್ತಿಗೆ ಅವಕಾಶ ಇದ್ರು, ಬಡವ ರಾಸ್ಕಲ್‌ನ ನೋಡೋಕೆ ಬರ್ತಾ ಇದ್ದಾರೆ.

ಬಡವ ರಾಸ್ಕಲ್‌ ಅದಾಗ್ಲೆ ವೂಟ್‌ ಓಟಿಟಿಯಲ್ಲೂ ಲಭ್ಯವಾಗ್ತಾ ಇದ್ರೂ, ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಇಷ್ಟ ಪಡ್ತಾ ಇದ್ದಾರೆ. ಈ ಖುಷಿಯನ್ನ ಡಾಲಿ ಧನಂಜಯ ಶೇರ್‌ ಮಾಡಿ, ಸಿನಿಮಾ ಗೆಲ್ಲಿಸಿ, ಇವತ್ತಿಗೂ ಪ್ರೋತ್ಸಾಹ ಮಾಡ್ತಿರೋ ಚಿತ್ರಪ್ರೇಮಿಗಳಿಗೆ ಧನ್ಯವಾದ ಹೇಳಿದ್ದಾರೆ. ಸಿನಿಮಾ ಚೆನ್ನಾಗಿತ್ತು ಅಂದ್ರೆ ಕೊರೊನಾಕ್ಕೆಲ್ಲಾ ಜನ ಹೆದರಲ್ಲ ಅನ್ನೋದನ್ನ ಜನರೇ ಮತ್ತೆ ಮತ್ತೆ ಪ್ರೂವ್‌ ಮಾಡಿದಂತಾಯ್ತು. ಇನ್ನೂ ಸರ್ಕಾರ ಥಿಯೇಟರ್‌ ಪೂರ್ಣ ಭರ್ತಿಗೆ ಅವಕಾಶ ಕೊಟ್ರೆ ಚಿತ್ರಪ್ರೇಮಿಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಿನಿಮಾಗಳನ್ನ ನೋಡಿ, ನಷ್ಟದಲ್ಲಿರೋ ಚಿತ್ರರಂಗವನ್ನ ಮರಳಿ ಚೇತರಿಸಿಕೊಳ್ಳುವಂತೆ ಮಾಡ್ತಾರೆ.

Exit mobile version