ಎಲ್ಲರಿಂದ ಪ್ರಶಂಸೆ ಪಡೆದ ‘ಅಶ್ವಿನಿ ಪುನೀತ್ ರಾಜಕುಮಾರ್’ ನಡೆ

ಪವರ್​ ಸ್ಟಾರ್ ಪುನೀತ್​​ ರಾಜಕುಮಾರ್​ ಒಂದು ಸಿನಿಮಾಗೆ ಡೇಟ್ಸ್​ ನೀಡಿದ್ದರು. ಜೊತೆಗೆ ಆ ನಿರ್ಮಾಪಕರು 2 ಕೋಟಿ ಅಡ್ವಾನ್ಸ್​ ಕೊಟ್ಟಿದ್ದರಂತೆ. ಪುನೀತ್ ನಿಧನದ ನಂತರ ಆ ನಿರ್ಮಾಪಕರು ಕೂಡ ಅಪ್ಪು ಇಲ್ಲ ಎಂಬುದನ್ನು ನೆನೆದು ಕಣ್ಣೀರಿಟ್ಟಿದ್ದರು. ಹಣದ ಬಗ್ಗೆ ಆ ನಿರ್ಮಾಕರು ಯಾರ ಬಳಿಯೂ ಏನೂ ಕೇಳಿಲ್ಲ. ಆದರೂ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಆ ನಿರ್ಮಾಪಕರಿಗೆ ತಾವು ಕೊಟ್ಟಿರುವ 2 ಕೋಟಿ ಹಣವನ್ನು ವಾಪಸ್​ ಪಡೆಯುವಂತೆ ಕರೆ ಮಾಡಿ ಹೇಳಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬದುಕಿದರೇ ಹೀಗೆ ಬದುಕಬೇಕು ಎಂದು ಪವರ್​ ಸ್ಟಾರ್​ ಅಪ್ಪು ಎಲ್ಲರಿಗೂ ತೋರಿಸಿ ಇಹಲೋಕ ತ್ಯಜಿಸಿದ್ದಾರೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಎಲ್ಲರೂ ಒಪ್ಪಿಕೊಂಡು ಹೋಗಬೇಕು. ಅವರು ಮಾಡುತ್ತಿದ್ದ ಕೆಲಸಗಳನ್ನು ಅವರ ಅಭಿಮಾನಿಗಳು ಅಳವಡಿಸಿಕೊಂಡಿದ್ದಾರೆ. ದೊಡ್ಮನೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ದೊಡ್ಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನ ಇದು. ಅಪ್ಪು ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಪ್ಪು ಹೇಳದೆ, ಕೇಳದೇ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಆದರೆ, ಇತಂಹ ಸಮಯದಲ್ಲಿ ಆ ದೊಡ್ಮನೆ ಸೊಸೆಯ ದೊಡ್ಡ ಮನಸ್ಸು ಮಾಡಿರುವ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಪ್ಪು ಅವರಂತೆ ನೀವು ಮೇಡಂ ನಿಮಗೆ ಒಂದು ಸಲಾಂ ಅಂತ ಅಶ್ವಿನಿ ರಾಜ್​ಕುಮಾರ್ಅವರಿಗೆ ಫ್ಯಾನ್ಸ್​ ಹೇಳುತ್ತಿದ್ದಾರೆ.

ಇದ್ದಷ್ಟು ದಿನ ಮಾಡಿದ ಸಹಾಯವನ್ನು ಯಾರಿಗೂ ತಿಳಿಯದಂತೆ ನಮ್ಮ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮಾಡಿದ್ದರು. ಅವರ ಸಹಾಯ ಮಾಡಿದ್ದನ್ನು ಅವರ ಅಭಿಮಾನಿಗಳು ಮುಂದುವರೆಸಲು ಮುಂದಾಗಿದ್ದಾರೆ. ಇದೆಲ್ಲರ ನಡುವೆ ಅಶ್ವಿನಿ ರಾಜ್​ಕುಮಾರ್​ ಅವರ ಈ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಮ್ಮ ಅಪ್ಪು ಅವರ ಪತ್ನಿಯಾಗಿ ನೀವು ಮಾಡುತ್ತಿರುವ ಕೆಲಸ ನಿಜಕ್ಕೂ ಮೆಚ್ಚುವಂತದ್ದು. ಇದು ಹೀಗೆ ಮುಂದುವರೆಯಲಿ ಮೇಡಂ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

****

Exit mobile version