ಮದಗಜ ಶೂಟ್‌ ನಲ್ಲಿ ಆಶಿಕಾ ಬೆನ್ನು ಬೆಂದು ಹೋಗಿತ್ತು..!

ಮದಗಜ ಸಿನಿಮಾ ಕಳೆದ ವಾರ ರಿಲೀಸ್‌ ಆಗಿ, ೨೫ ಕೋಟಿ ಕಲೆಕ್ಷನ್‌ ಜೊತೆಗೆ ಒಳ್ಳೆ ರೆಸ್ಪಾನ್ಸ್‌ ಪಡ್ಕೋತಾ ಇದೆ. ಮಾಸ್‌ ಪ್ರೇಕ್ಷಕರ ಜೊತೆಗೆ ಫ್ಯಾಮಿಲಿ ಆಡಿಯೆನ್ಸ್‌ಗಳೂ ಸಿನಿಮಾ ನೋಡೋಕೆ ಥಿಯೇಟರ್‌ಗೆ ಬರ್ತಾ ಇದ್ದಾರೆ. ಈನಡುವೆ ಸಿನಿಮಾದ ನಾಯಕಿ, ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿರುವ ಆಶಿಕಾ ರಂಗನಾಥ್‌, ಮದಗಜ ಸಿನಿಮಾದ ಆ ಪಾತ್ರಕ್ಕಾಗಿ ಪಟ್ಟ ಕಷ್ಟಗಳನ್ನ ಫೋಟೋ ರೂಪದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಹಳ್ಳಿ ಹುಡುಗಿ ಪಲ್ಲವಿ ಪಾತ್ರದಲ್ಲಿ ನಟಿಸಿರೋ ಆಶಿಕಾ ಸಿನಿಮಾದಲ್ಲಿ ಟ್ಯ್ರಾಕ್ಟರ್‌ ಓಡಿಸೋದು, ಗದ್ದೆಯಲ್ಲಿ ಕೆಲಸ ಮಾಡೋದು ಹೀಗೆ ಬಿಸಿಲಲ್ಲಿ ಶೂಟ್‌ ಮಾಡಿದ್ದಾರೆ. ಈ ಸಮಯದಲ್ಲಿ ಬಿಸಿಲ ಝಳಕ್ಕೆ ಹೇಗೆ ತಮ್ಮ ಬೆನ್ನು ಬೆಂದು ಹೋಗಿತ್ತು ಅಂತ ಫೋಟೋ ಒಂದನ್ನ ಪೋಸ್ಟ್‌ ಮಾಡಿದ್ದಾರೆ. ಇದ್ರ ಜೊತೆಗೆ ತಮ್ಮ ಟ್ಯಾಕ್ಟರ್‌ ಓಡಿಸೋ, ಹಳ್ಳಿ ಶೂಟಿಂಗ್‌ನ ಅನುಭವಗಳನ್ನ ಶೇರ್‌ ಮಾಡಿದ್ದಾರೆ.

Exit mobile version