VIRAL : ಅಲ್ಲು ಅರ್ಜುನ್‌ಗೆ ಮಕ್ಕಳ ಅಪ್ಪುಗೆ

15 ದಿನಗಳ ಹಿಂದೆ ಟಾಲಿವುಡ್‌ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ ಗೆ ಕೊರೊನಾ ಪಾಸಿಟೀವ್‌ ಬಂದಿದ್ದ ಹಿನ್ನೆಲೆಯಲ್ಲಿ, ತಮ್ಮ ಮನೆಯ ಮತ್ತೊಂದು ಮಹಡಿಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇದ್ರು, ಇದೇ ಕಾರಣಕ್ಕೆ ತಮ್ಮ ಮನೆಯವ್ರು ಹಾಗೂ ಮುದ್ದಿನ ಮಕ್ಕಳಿಂದ ದೂರವೇ ಉಳಿದಿದ್ರು. ಇಂದು ಕ್ವಾರಂಟೈನ್‌ ಮುಗಿಸಿ, ಕೊರೊನಾ ಟೆಸ್ಟ್‌ ರಿಸಲ್ಟ್‌ ನೆಗೆಟೀವ್‌ ಬಂದ ನಂತ್ರ ಮನೆಗೆ ಮರಳಿದ್ದಾರೆ. ಮನೆಗೆ ತಂದೆ ಅಲ್ಲು ಅರ್ಜುನ್‌ ಬರ್ತಾ ಇದ್ದಂತೆ ಅವ್ರ ಮಕ್ಕಳು ಅಯಾನ್‌ ಹಾಗೂ ಅರ್ಹ ಇಬ್ಬರೂ ಒಡ್ಡಿ ಬಂದು ಅಪ್ಪನನ್ನ ತಬ್ಬಿ ಹಿಡಿದು ತಮ್ಮ ಪ್ರೀತಿಯನ್ನ ಹೊರಹಾಕಿದ್ದಾರೆ. ಅಲ್ಲು ಅರ್ಜುನ್‌ ಕೂಡ ೧೫ ದಿನಗಳಿಂದ ಮಕ್ಕಳಿಂದ ದೂರವಿದ್ದ ಬೇಸರವನ್ನ ಅಪ್ಪುಗೆಯಿಂದ, ಮುದ್ದಾಡಿ ದೂರ ಮಾಡಿಕೊಂಡರು, ಈ ವಿಡಿಯೋ ಈಗ ವೈರಲ್‌ ಆಗಿದೆ.

Exit mobile version