ಮಾರ್ಚ್‌ಗೆ ರಮ್ಯಾ ಸರ್‌ಪ್ರೈಸ್‌..! ಮದುವೇನಾ?ಸಿನಿಮಾನಾ?ರಾಜಕೀಯನಾ?

ನಿನ್ನೆ ಆದಿಕೇಶವ ಅನ್ನೋರ ಆಡಿ ಕಾರಿನ ಅಟ್ಟಹಾಸಕ್ಕೆ ಮರಥಪಟ್ಟ ಬೀದಿ ನಾಯಿ ಲಾರಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ್ದ ನಟಿ ರಮ್ಯ, ಮಾಧ್ಯಮದವರ ಜೊತೆ ಮಾತನಾಡುತ್ತ ಮುಂದಿನ ತಿಂಗಳು ಅಂದ್ರೆ ಮಾರ್ಚ್‌ನಲ್ಲಿ ಒಂದು ಸರ್‌ಪ್ರೈಸ್‌ ಕೊಡುವುದಾಗಿ ಹೇಳಿದ್ದಾರೆ.

ಸಮಾನ್ಯವಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳದೇ ಇರ್ತಾ ಇದ್ದ ರಮ್ಯ, ನಿನ್ನ ಲಾರಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದೆ ದೊಡ್ಡ ಸರ್‌ಪ್ರೈಸ್‌ ಈ ನಡುವೆ, ಮಾಧ್ಯಮದವ್ರು ಬಿಡದೇ ಕೇಳಿದ ಹತ್ತು ಪ್ರಶ್ನೆಗೆ ರಮ್ಯಾ ನೀಡಿದ ಉತ್ತರ ಮಾರ್ಚ್‌ ಸರ್‌ಪ್ರೈಸ್‌..!

ರಮ್ಯಾಗೆ ಈಗಲೂ ಯರ್ರಾಬಿರ್ರಿ ಫ್ಯಾನ್‌ ಫಾಲೋಯರ್ಸ್‌ ಇದ್ದಾರೆ. ರಮ್ಯಾ ಈಗ ಸಿನಿಮಾಕ್ಕೆ ಬಂದರೂ ನೋಡುವ ಅಭಿಮಾನಿಗಳಿದ್ದಾರೆ, ಆದ್ರೆ ರಮ್ಯಾ ತೆರೆ ಮೇಲೆ ಮಿಂಚೋಕೆ ಬರ್ತಾರಾ, ಬಂದ್ರು ಯಾವ ರೀತಿಯ ಪಾತ್ರ ಮಾಡ್ತಾರೆ ಅಥವ ತೆರೆಹಿಂದೆ ನಿಂತು ಸಿನಿಮಾ ನಿರ್ಮಾಣಕ್ಕೇನಾದ್ರು ಕೈ ಹಾಕ್ತಾರಾ ಅನ್ನೋದೇ ಈಗಿರೋ ಪ್ರಶ್ನೆ.

ಹಾಗಾದ್ರೆ ಮಾರ್ಚ್‌ನಲ್ಲಿ ರಮ್ಯಾ ಅಭಿನಯದ ಸಿನಿಮಾ ಅನೌನ್ಸ್‌ ಆಗುತ್ತಾ? ಈ ನಡುವೆ ರಮ್ಯ ಕನ್ನಡದ ಸಿನಿಮಾ ಮಂಧಿ ಯಾರೇ ಕೇಳಿದ್ರು, ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪ್ರಮೋಟ್‌ ಮಾಡಿಕೊಡ್ತಾ ಇದ್ದಾರೆ. ಇದು.. ರಮ್ಯಾ ಸಿನಿಮಾ ರಿಎಂಟ್ರಿಯ ಮುನ್ಸೂಚನೆಯ..! ಗೊತ್ತಿಲ್ಲ. ಆದ್ರೆ ಸಿನಿಮಾ ಮೂಲಕ ವಾಪಸ್ಸಾದ್ರೆ ಅದು ನಿಜಕ್ಕೂ ಅಭಿಮಾನಿಗಳಿಗೆ ಸ್ವೀಟ್‌ ಸರ್‌ಪ್ರೈಸ್‌..

ಇನ್ನೂ ರಮ್ಯಾ ಮದುವೆ ವಿಚಾರಕ್ಕೆ ಬರೋದಾದ್ರೆ, ರಮ್ಯಾ ಮದುವೆ ಬಗ್ಗೆ ಹಲವು ಗಾಸಿಪ್‌ಗಳಿವೆ, ರಮ್ಯಾಗೂ ವಯಸ್ಸಾಗ್ತಾ ಇದೆ, ಹಾಗಾಗಿ ರಮ್ಯಾ ತಮ್ಮ ಮದುವೆ ಬಗೆಗೇನಾದರೂ ಸರ್‌ಪ್ರೈಸ್‌ ಕೊಡಲಿದ್ದಾರಾ?

ಹಾಗಾದ್ರೆ ರಮ್ಯಾರನ್ನ ವರಿಸಲಿರೋ ಆ ಗಂಡು ಯಾರು? ಇಷ್ಟು ದಿನ ರಮ್ಯಾ ಮದುವೆಯಾಗದೆ ಉಳಿದ್ದಿದ್ದು ಯಾಕೆ?ಅನ್ನೋ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತಾ?

ರಮ್ಯಾ ನಟಿಯಾದ ನಂತಯ್ರ ಮಂಡ್ಯದ ಸಂಸದೆಯಾಗಿದ್ದವರು, ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಕೇಂದ್ರದಲ್ಲಿ ಗುರುತಿಸಿಕೊಂಡವರು, ರಾಹುಲ್‌ ಗಾಂಧಿಯ ಆಪ್ತವಲಯದಲ್ಲಿ ಇದ್ದವರು, ನಿನ್ನೆ ಕೂಡ ರಮ್ಯಾ ಜೊತೆಗೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಕಾಣಿಸಿಕೊಂಡಿದ್ದರು.

ಹಾಗಾದ್ರೆ ರಮ್ಯಾ ಪಾಲಿಟಿಕ್ಸ್‌ನಲ್ಲಿ ಮತ್ತೆ ಆಕ್ಟೀವ್‌ ಆಗ್ತಾರಾ? ಆ ಬಗ್ಗೆ ಏನಾದ್ರು ಹೇಳೋಕೆ ಮಾರ್ಚ್‌ನಲ್ಲಿ ವೇದಿಕೆ ಸಿದ್ದವಗ್ತಾ ಇದ್ಯಾ? ಎಲ್ಲಕ್ಕೂ ಉತ್ತರಕ್ಕಾಗಿ ಮಾರ್ಚ್‌ ವರೆಗೂ ಕಾಯಲೇಬೇಕು.

Exit mobile version