ನಟ ಅವಿನಾಶ್‌ ದೇವರಮನೆಯಲ್ಲಿ ವಿಷ್ಣುವರ್ಧನ್‌ ಫೋಟೋಗೆ ಪೂಜೆ….!

ಕನ್ನಡ ಸಿನಿಮಾರಂಗ ಅದ್ಬುತ ಕಲಾವಿದರಲ್ಲಿ ಅವಿನಾಶ್‌ ಕೂಡ ಪ್ರಮುಖರು ಕಿರುತೆರೆ ಹಿರಿತೆರೆ ಎರಡರಲ್ಲಿಯೂ ಅವಿನಾಶ್‌ ಅಭಿನಯ ಅಮೋಘವಾದಂತದ್ದು…ಪಾಸಿಟಿವ್‌ ಪಾತ್ರವಿರಲಿ, ನೆಗೆಟಿವ್‌ ಮಾತ್ರವಿರಲಿ, ಎಂಥದ್ದೇ ಪಾತ್ರಕ್ಕೂ ಜೀವ ತುಂಬೋ ಕಲೆ ಇರೋ ಕಲಾವಿದ…ಕನ್ನಡ ತಮಿಳು ಸೇರಿದಂತೆ 200ಕ್ಕೂ ಹೆಚ್ಚು ಚಿತ್ರದಲ್ಲಿ ಅವಿನಾಶ್‌ ಅಭಿನಯ ಮಾಡಿದ್ದಾರೆ….

1986 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವಿನಾಶ್‌ ಕಳೆದ 37 ವರ್ಷದಿಂದ ಚಿತ್ರರಂಗದಲ್ಲಿ ಅಭಿನಯ ಮಾಡುತ್ತಾ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ…ಅವಿನಾಶ್‌ ನಟ ವಿಷ್ಣುವರ್ಧನ್‌ ಅವ್ರ ಜೊತೆ ಉತ್ತಮ ಬಾಂದವ್ಯ ಹೊಂದಿದ್ರು…ಸಿನಿಮಾ ಕಲಾವಿದರು ಅನ್ನೋದಕ್ಕಿಂತ ಹೆಚ್ಚಾಗಿ ಸ್ನೇಹಿತರಾಗಿದ್ದಾರೆ….

ವಿಷ್ಣುವರ್ಧನ್‌ ಅವ್ರ ಬಹುತೇಕ ಚಿತ್ರದಲ್ಲಿ ಅವಿನಾಶ್‌ ಇದ್ದೇ ಇರುತ್ತಿದ್ದರು…ಸದ್ಯ ಅವಿನಾಶ್‌ ಈ ವಾರದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ…ಈ ಸಮಯದಲ್ಲಿ ವಿಷ್ಣುವರ್ಧನ್‌ ಜೊತೆಗಿನ ಒಡನಾಟ ಹಾಗೂ ವಿಷ್ಣುವರ್ಧನ್‌ ಅವ್ರನ್ನ ಪ್ರೀತಿಸೋದು ಮಾತ್ರವಲ್ಲ ಪೂಜಿಸುತ್ತೇವೆ ಅನ್ನೋದನ್ನ ಹೇಳಿಕೊಂಡಿದ್ದಾರೆ…ತಮ್ಮ ದೇವರ ಮನೆಯಲ್ಲಿ ವಿಷ್ಣು ಅವ್ರ ಫೋಟೋ ಇಟ್ಟು ಪೂಜೆ ಮಾಡೋ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ..ಅವಿನಾಶ್‌ ….

Exit mobile version