ಸುದೀಪ್ ರಾಜಕೀಯ ಅಖಾಡಕ್ಕೆ ಎಂಟ್ರಿ….ನಾಳೆ ಮಹೂರ್ತ ಫಿಕ್ಸ್
ಸುದೀಪ್ ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಮೊದಲಿನಿಂದಲೂ ಜೋರಾಗಿತ್ತು…
ಚುನಾವಣೆಯ ಕಾವು ಜೋರಾಗುತ್ತಿದ್ದಂತೆ ಮತ್ತೆ ಸುದೀಪ್ ಹೆಸರು ರಾಜಕೀಯ ರಣರಂಗದಲ್ಲಿ ಕಿಚ್ಚ ಸುದೀಪ್ ಜೋರಾಗಿ ಕೇಳಿ ಬಂತು… ಆದರೆ ಕಿಚ್ಚ ಸುದೀಪ್ ಆಗಲೀ ಅವರ ಆತ್ಮೀಯರಾಗಲಿ ಈ ವಿಚಾರವಾಗಿ ಇಲ್ಲಿಯೂ ಮಾತನಾಡಿರಲಿಲ್ಲ…
ಆದರೆ ಈಗ ಕಿಚ್ಚ ಸುದೀಪ್ ರಾಜಕೀಯ ರಂಗಕ್ಕೆ ಎಂಟ್ರಿ ಕೊಡುವುದು ಅಧಿಕೃತವಾಗಿದೆ… ಸುದೀಪ್ ಅಧಿಕೃತವಾಗಿ ನಾಳೆ ಬಿಜೆಪಿ ಪಕ್ಷ ಸೇರಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ …ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಸುದೀಪ ಯಾವುದೇ

ಪಕ್ಷಕ್ಕೆ ಸೀಮಿತವಾಗಿರಲಿಲ್ಲ… ಯಾಕೆಂದರೆ ಎಲ್ಲಾ ಪಕ್ಷದಲ್ಲಿಯೂ ಸುದೀಪ್ ಅವರಿಗೆ ಆತ್ಮೀಯರಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಸುದೀಪ ಅವರು ಸಿಎಂ ಬೊಮ್ಮಾಯಿ ಅವರ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು ….ಸುಮಾರು ವರ್ಷ ಹಿಂದಿನಿಂದಲೂ ಬೊಮ್ಮಾಯಿ ಹಾಗೂ ಸುದೀಪ್ ಕುಟುಂಬಸ್ಥರು ಬಹಳ ಆತ್ಮೀಯರಾಗಿದ್ದರು….ಹಾಗಾಗಿ ಸುದೀಪ್ ಬಿಜೆಪಿ ಪಕ್ಷ ಸೇರಲಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿದೆ
1 Comment
Which Place is he electing from