ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ “ರಾಣ” ಚಿತ್ರದ ಆಕ್ಷನ್ ಟ್ರೇಲರ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಿಲೀಸ್ ಮಾಡಿದ್ದಾರೆ. ಟ್ರೇಲರ್ ರಿಲೀಸ್ ಮಾಡಿ ಮಾತನಾಡುತ್ತ, ನನ್ನ ಆತ್ಮೀಯ ಗೆಳೆಯ. ಈ ಚಿತ್ರಕ್ಕಾಗಿ ಆತ ಪಟ್ಟಿರುವ ಶ್ರಮ ಟ್ರೇಲರ್ ನಲ್ಲಿ ಕಾಣ್ತಿದೆ. ಕೆ.ಮಂಜು ಅವರ ಸಾರಥ್ಯದಲ್ಲಿ ಈ ಚಿತ್ರ ಚೆನ್ನಾಗಿ ಬಂದಿದೆ. ನಾನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇನೆ. ನೀವು ನೋಡಿ ಅಂದ್ರು ಧ್ರುವ ಸರ್ಜಾ.ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಕೂಡ ಟ್ರೇಲರ್ ರಿಲೀಸ್‌ಗೆ ಬಂದು ಶುಭ ಕೋರಿದರು.
ನಾಯಕ ನಟ ಶ್ರೇಯಸ್ ಮಂಜು ಮಾತನಾಡಿ ಸಿನಿಮಾ ನನ್ನ ಉಸಿರು. ಪಡ್ಮೂಡೆ ಹುಲಿ ಆದ್ಮೇಲೆ ಮೂರುವರೆ ವರ್ಷಗಳ ನಂತ್ರ ನನ್ನ”ರಾಣ” ಸಿನಿಮಾ ಇದೇ ನವೆಂಬರ್ 11ಕ್ಕೆ ರಿಲೀಸ್ ಆಗ್ತಾ ಇದೆ. ಈ ದಿನಕ್ಕಾಗಿ ನಾನು ಕಾಯುತ್ತಿದೆ ಎಂದು ಶ್ರೇಯಸ್ ಭಾವುಕರಾದರು. ಟ್ರೇಲರ್ ಬಿಡುಗಡೆ ಮಾಡಿ ಪ್ರೋತ್ಸಾಹ ನೀಡಿದ ಧ್ರುವ ಸರ್ಜಾ ಶ್ರೇಯಸ್ ಧನ್ಯವಾದ ತಿಳಿಸಿದರು.
ಅವಕಾಶ ನೀಡಿದ್ದ ಕೆ.ಮಂಜು ಹಾಗೂ ಪುರುಷೋತ್ತಮ್ ಅವರಿಗೆ ಧನ್ಯವಾದ ಹೇಳಿದ ನಿರ್ದೇಶಕ ನಂದ ಕಿಶೋರ್, ಚಿತ್ರ ಚೆನ್ನಾಗಿ ಬಂದಿದೆ ಅಂದ್ರೆ ಅದಕ್ಕೆ ಕಾರಣ ನನ್ನ ತಂಡ. ಸಿನಿಮಾದ ಆರಂಭದಿಂದಲೂ ಸಪೋರ್ಟ್ ಮಾಡುತ್ತಿರುವ ಧ್ರುವ ಸರ್ಜಾ ಥ್ಯಾಂಕ್ಸ್ ಹೇಳಿದ್ರು.
“ಏಕ್ ಲವ್ ಯಾ” ಚಿತ್ರದ ನಂತರ “ರಾಣ” ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಅಂತ ಚಿತ್ರದ ಹೀರೋಯಿನ್ ರೀಷ್ಮಾ ನಾಣಯ್ಯ ಹೇಳಿದ್ರು. ರಜನಿ ಭಾರದ್ವಾಜ್, ರಘು, ಮೋಹನ್ ಧನರಾಜ್ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಸಂಗೀತ ನಿರ್ದೇಶನದೊಂದಿಗೆ ಈ ಚಿತ್ರಕ್ಕೆ ರೀರೆಕಾರ್ಡಿಂಗ್ ಸಹ ಮಾಡಿರುವುದಾಗಿ ಚಂದನ್ ಶೆಟ್ಟಿ ಹೇಳಿದ್ರು, ನಿಜವಾಗಲೂ “ರಾಣ” ಚಿತ್ರ ಚೆನ್ನಾಗಿದೆ. 11.11.22 ಒಳ್ಳೆ ದಿನ. ನನ್ನ ಮಗನ ಸಿನಿಮಾ ಬಿಡುಗಡೆಯಾಗ್ತಿದೆ. ನನ್ನ ಮಗ ಸೇರಿದಂತೆ ಈಗ ಬರುತ್ತಿರುವ ಯವ ನಟರಿಗೆ ಒಳ್ಳೆಯ ಭವಿಷ್ಯವಿದೆ ಅಂದ್ರು ನಿರ್ಮಾಪಕ ಹಾಗೂ ಶ್ರೇಯಸ್ ತಂದೆ ಕೆ ಮಂಜು.
ಕೆ.ಮಂಜು ಅವರ ಸಾರಥ್ಯದಲ್ಲಿ ಹಾಗೂ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ನೋಡಿ ಹರಿಸಿ ಎಂದು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಹೇಳಿದ್ರು