1st Day ಡೆವಿಲ್ Box Office10Cr + ಕಲೆಕ್ಷನ್..!?
Pallavi N Raj
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮಿಲನ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಆರಂಭವಾಗಿದೆ.. ರಾಜ್ಯದಾದ್ಯಂತ ದಚ್ಚು ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ.. ಎಲ್ಲಾ ಕಡೆಗಳಲ್ಲೂ ದರ್ಶನ್ ರದ್ದೇ ಸದ್ದು, ಡೆವಿಲ್ ದೇ ಮಾತು..
ಹೌದು.. ಸಿನಿಮಾ ರಿಲೀಸ್ಗೂ ಮುನ್ನವೇ 3.5 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಚಿತ್ರ ಸಂಗ್ರಹ ಮಾಡಿದೆ. ಈ ಸಿನಿಮಾ ನಿರ್ಮಾಣ ಸಂಸ್ಥೆ ಜೈ ಮಾತಾ ಮಾತಾ ಕಂಬೈನ್ಸ್ ಈ ಕುರಿತು ಪೋಸ್ಟರ್ ಬಿಡುಗಡೆ ಕೂಡ ಮಾಡಿದ್ದಾರೆ.. ಜೈ ಮಾತಾ ಕಂಬೈನ್ಸ್ ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿ, ಒಂದು ಐಕಾನ್, ಒಂದು ಅತ್ಯುತ್ಸಾಹದ ಅಭಿಮಾನಿ ಸೇನೆ, ಇವರಿಂದ ಸಂಗ್ರಹವಾದ ಮೊತ್ತ 2 ಕೋಟಿ 52 ಲಕ್ಷ ಎಂದು ತಿಳಿಸಿತ್ತು
ಯೆಸ್.. ಸದ್ಯ ಗಂಟೆಗೆ 11 ಸಾವಿರ ಟಿಕೆಟ್ ಬುಕಿಂಗ್ ಆಗಿದ್ದು, 55,000ಕ್ಕೂ ಹೆಚ್ಚು ಫ್ಯಾನ್ಸ್ ಶೋಗಳ ಟಿಕೆಟ್ ಸೇಲಾಗಿದೆ ಎನ್ನಲಾಗಿದೆ. ದರ್ಶನ್ ಸಿನಿಮಾವನ್ನು ಗೆಲ್ಲಿಸಲೇಬೇಕೆಂಬ ಛಲಕ್ಕೆ ಬಿದ್ದಿರುವ ಅವರ ಅಭಿಮಾನಿಗಳಿಂದಾಗಿ ಫಸ್ಟ್ ಡೇ ಫಸ್ಟ್ ಶೋ ಹೌಸ್ಫುಲ್ ಆಗಿದೆ. ಈ ಹಿನ್ನೆಲೆಯಲ್ಲಿ ಶೋಗಳ ಸಂಖ್ಯೆ ಹೆಚ್ಚಳವಾಗ್ತಲೇ ಇದೆ..
ಇನ್ನೊಂದೆಡೆ ಸಿನಿಮಾ ಟ್ರೇಲರ್ ವೀಕ್ಷಣೆಗೆ ಅತ್ಯುತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 1.5 ಕೋಟಿ ವೀಕ್ಷಣೆ ದಾಖಲಾಗಿದೆ. ದರ್ಶನ್ ಸಿನಿಮಾ ಕೆರಿಯರ್ನಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಡೆವಿಲ್ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ.
ಅಂದಹಾಗೆ.. ಇದೀಗ ವಿಲನ್ ಶೇಡ್ನಲ್ಲಿ, ಪ್ಲೇ ಬಾಯ್ ಆಗಿ, ರೊಮ್ಯಾಂಟಿಕ್ ಆಗಿ ಹಲವು ರೀತಿ ಕಾಣಿಸಿಕೊಂಡಿರುವ ದರ್ಶನ್ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜೊತೆಗೆ ಗಿಲ್ಲಿ ನಟನ ಪಾತ್ರವೂ ಹೈಲೈಟ್ ಆಗಿದೆ.
ಇನ್ನೂ.. ಡೆವಿಲ್ ಅಬ್ಬರಿಸಿ ಬೆಬ್ಬಿರಿಯೋದಕ್ಕೆ ಜಸ್ಟ್ 24 ಗಂಟೆ ಮಾತ್ರ ಬಾಕಿಯಿದ್ದು ಅಭಿಮಾನಿಗಳು ದಾಸನನ್ನು ಬಹಳ ದಿನಗಳ ನಂತರ ಬೆಳ್ಳಿ ಪರದೆಯ ಮೇಲೆ ನೋಡಲು ಕಾದು ಕುಳಿತಿದ್ದಾರೆ..