ಟಾಕ್ಸಿಕ್ಗೆ ರವಿಬಸ್ರೂರ್ ಸಂಗೀತ ಅಧಿಕೃತ..!
ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಟಾಕ್ಸಿಕ್ ಚಿತ್ರ ಮುಂದಿನ ವರ್ಷ ತೆರೆಗೆ ಬರಲು ಸಿದ್ಧವಾಗುತ್ತಿದೆ. ಚಿತ್ರದಲ್ಲಿ ದೊಡ್ಡ ತಾರ ಬಳಗವೇ ಇದೆ ಎಂಬ ಮಾಹಿತಿಗಳು ಸಿಕ್ಕಿದು, ಚಿತ್ರದ ಸಂಗೀತ ನಿರ್ದೇಶಕರ ಬಗ್ಗೆ ಅನೇಕ ಊಹಪೋಹಗಳಿದ್ದವು.
ಆದರೆ ಈಗ ಇದಕ್ಕೆ ಚಿತ್ರ ತಂಡ ಬಿಡುಗಡೆ ಮಾಡಿರುವ ಪೋಸ್ಟರ್ ಇಂದ ಉತ್ತರ ಸಿಕ್ಕಿದೆ. ಇಂದು ಚಿತ್ರ ತಂಡವು ಫಿಲಂ ರಿಲೀಸ್ ಗೆ 100 ದಿನ ಬಾಕಿ ಇದೆ ಎನ್ನುವ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮತ್ತೊಮ್ಮೆ ಕನ್ಫರ್ಮ್ ಮಾಡಿದರು.
ಆ ಪೋಸ್ಟರ್ನ ಕೆಳಗೆ ಬಳಸಿದ್ದ ಹ್ಯಾಶ್ಟ್ಯಾಗ್ ನಲ್ಲಿ ರವಿ ಬಸ್ರುರ್ ಅವರ ಟ್ಯಾಗ್ ಕೂಡ ಇದೆ. ಹಾಗಾಗಿ ಈ ಚಿತ್ರಕ್ಕೆ ಅವರೇ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ ಎಂಬುವುದು ಖಚಿತ ವಾಗಿದೆ.
ಈ ಮೊದಲು ಅನಿರುದ್ದ್ ರವಿಚಂದರ್ ಅವರ ಹೆಸರು ಕೇಳಿ ಬರುತ್ತಿತ್ತು ಆದರೆ ಇತ್ತೀಚೆಗೆ ಯಶ್ ಅವರು ರವಿ ಬಸ್ರೂರ್ ಅವರ ಸ್ಟುಡಿಯೋಗೆ ಭೇಟಿ ನೀಡಿದ್ದರು ಎಂಬ ಮಾಹಿತಿಯಿಂದ, ರವಿ ಬಸ್ರೂರ್ ಟಾಕ್ಸಿಕ್ ಚಿತ್ರದ ಸಂಗೀತ ನಿರ್ದೇಶಕರಾಗಿರಬಹುದು ಎಂಬ ಸುದ್ದಿ ಕೇಳಿಬರುತ್ತಿತ್ತು.ಈಗ ಅದಕ್ಕೆ ಸ್ಪಷ್ಟ ಉತ್ತರ ಸಿಕ್ಕಂತಾಗಿದೆ.
ಈ ಹಿಂದೆ ಯಶ್ ಅವರ ಕೆಜಿಎಫ್ ಮತ್ತು ಕೆಜಿಎಫ್ ಚಾಪ್ಟರ್ 2 ಎಂಬ ಬ್ಲಾಕ್‌ಬಸ್ಟರ್‌ಗಳಿಗೆ ರವಿ ಬಸ್ರೂರ್ ಸಂಗೀತ ನೀಡಿದ್ದರು.ಆ ಸಂಗೀತಗಳು ಸಿನಿ ಪ್ರೇಕ್ಷಕರಿಗೆ ಸಕ್ಕತ್ ಇಷ್ಟ ಆಗಿತ್ತು. ಇದೀಗ ಮತ್ತೆ ಯಶ್ ಅವರ ಸಿನಿಮಾಗೆ ಸಂಗೀತ ನೀಡುವ ವಿಷಯ ಕನ್ಫರ್ಮ್ ಆಗಿರುವುದರಿಂದ ಅಭಿಮಾನಿಗಳಲ್ಲಿ ಇನ್ನು ಹೆಚ್ಚು ಕುತೂಹಲ ಮೂಡಿದೆ.