ಟಾಕ್ಸಿಕ್ ಗಾಗಿ ಒಂದಾಗಿದೆ ಎರಡು ದೊಡ್ಡ ಶಕ್ತಿ ಯಶ್ ಫ್ಯಾನ್ಸ್ ಫಿದಾ!
By Pallavi N Raj
ರಾಕಿಭಾಯ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಿಡುಗಡೆಗೆ 100 ದಿನ ಬಾಕಿ ಇದೆ.. ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪ್ರಚಾರಕ್ಕಾಗಿ ತಂಡ ರೆಡಿಯಾಗಿದೆ. ಈಗ ಸಿನಿಮಾದ ಸಂಗೀತದ ಬಗ್ಗೆ ದೊಡ್ಡ ಸುದ್ದಿ ಹೊರಬಂದಿದ್ದು. ಸಂಗೀತ ಸಂಯೋಜಕರಾದ ಅನಿರುದ್ಧ್ ರವಿಚಂದರ್ ಹಾಗೂ ರವಿ ಬಸ್ರೂರು ಅವರು ಟಾಕ್ಸಿಕ್ ಸಿನಿಮಾಗಾಗಿ ಒಂದಾಗಿದ್ದಾರೆ ಎನ್ನಲಾಗಿದೆ. ಅನಿರುದ್ಧ್ ಹಾಡುಗಳಿಗೆ, ರವಿ ಬಸ್ರೂರು ಹಿನ್ನೆಲೆ ಸಂಗೀತಕ್ಕೆ ಕೆಲಸ ಮಾಡಲಿದ್ದಾರೆ ಅನ್ನೊ ಸುದ್ದಿ ಹೊರ ಬಿದ್ದಿದೆ..
ಟಾಕ್ಸಿಕ್ ಸಿನಿಮಾದ ಮ್ಯೂಸಿಕ್ ಬಗ್ಗೆ ಸಾಕಷ್ಟು ಕುತೂಹಲ ಇದ್ದು, ಇದನ್ನು ಕಂಪೋಸ್ ಮಾಡೋದು ಯಾರು ಅಮ್ಮೊದು ಇನ್ನೂ ಸ್ಪಷ್ಟವಾಗಿಲ್ಲ. ಅನಿರುದ್ಧ್ ಇದಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಬಟ್, ನಂತರ ರವಿ ಬಸ್ರೂರು ಹೆಸರು ಕೇಳಿ ಬಂತು. ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ಮಾಹಿತಿ ಏನೆಂದರೆ, ಈ ಎರಡೂ ದಿಗ್ಗಜರು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಟಾಕ್ಸಿಕ್ ಸಿನಿಮಾವನ್ನ ಗೀತು ಮೋಹನ್ದಾಸ್ ಅವರು ನಿರ್ದೇಶನ ಮಾಡ್ತಾಯಿದ್ದು, ಚಿತ್ರದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ ಮೊದಲಾದವರು ಬಣ್ಣಹಚ್ಚಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಿಸಿದೆ. ಈ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರುತ್ತಿದೆ. ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಇನ್ನು.. ರವಿ ಬಸ್ರೂರು ಕನ್ನಡದ ಖ್ಯಾತ ಸಂಗೀತ ಸಂಯೋಜಕರು. ಪರಭಾಷೆಯಲ್ಲೂ ಕೂಡ ಅವರಿಗೆ ಬೇಡಿಕೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಯಶ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕೆಲಸದ ವಿಷಯದಲ್ಲಿ ಇಬ್ಬರ ಮಧ್ಯೆ ಹೊಂದಾಣಿಕೆ ಇದೆ. ಅನಿರುದ್ಧ್ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ. ಹಲವು ಬಿಗ್ ಬಜೆಟ್ ಚಿತ್ರಗಳಿಗೆ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗ ರವಿ ಬಸ್ರೂರು ಅವರು ಟಾಕ್ಸಿಕ್ ಸಿನಿಮಾಗೆ ಬಿಜಿಎಂ ನೀಡಲಿದ್ದು, ಅನಿರುದ್ಧ್ ಅವರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಾರಂತೆ.
ಒಟ್ನಲ್ಲಿ.. ಈ ವಿಚಾರ ತಿಳಿತಾ ಇದ್ದಂತೆ ಯಶ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ..