ಮಾರ್ಕ್ ಎದುರು ಡೆವಿಲ್ ದಾಖಲೆ ಉಡೀಸ್!
By Pallavi N Raj
ವರ್ಷದ ಕೊನೆಯ ತಿಂಗಳು ಬಂದ್ರೆ ಸಾಕು ಸಿನಿರಸಿಕರಿಗೆ ಹಬ್ಬದ ವಾತಾವರಣ.. ಅದ್ರಲ್ಲೂ ಈ ಬಾರಿ ಡಿಸೆಂಬರ್ ನಲ್ಲಿ ತ್ರಿಬಲ್ ಧಮಾಕ ಅಂದ್ರೆ ತಪ್ಪೇನಿಲ್ಲ.. ಒಂದ್ಕಡೆ ಡೆವಿಲ್, ಮತ್ತೊಂದ್ಕಡೆ ಮಾರ್ಕ್ ಆದ್ರೆ ಇನ್ನೊಂದು ಕಡೆ ಅರ್ಜುನ್ ಜನ್ಯ ನಿರ್ದೇಶನದ 45 ಬರ್ತಾಯಿದೆ..
ಹೌದು.. ನಿನ್ನೆ ಬಹುದೊಡ್ಡ ವೇದಿಕೆ ಮೇಲೆ ಮಾರ್ಕ್ ಚಿತ್ರದ ಟ್ರೈಲರ್ ಲಾಂಚ್ ಆಗಿದೆ.. ಸಿನಿಮಾದ ಟ್ರೈಲರ್ ನೋಡಿದಂತ ಅಭಿಮಾನಿಗಳು ಕಿಚ್ಚನ ಮಾಸ್ ಲುಕ್ , ಸ್ಟೈಲ್ ಗೆ ಸ್ಟನ್ ಆಗಿದ್ದಾರೆ.. ಜಸ್ಟ್ ಒಂದು ದಿನದಲ್ಲೇ ಕೋಟಿ ಕೋಟಿ ವೀಕ್ಷಣೆಯನ್ನು ಪಡೆದುಕೊಂಡು ಡೆವಿಲ್ ದಾಖಲೆಯನ್ನು ಮುರಿದಿದೆ..
ಯೆಸ್.. ಡಿಸೆಂಬರ್ 5ರಂದು ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು.. ಜಸ್ಟ್ ಒಂದು ದಿನದಲ್ಲೇ 1 ಕೋಟಿ ವೀಕ್ಷಣೆಯನ್ನ ಪಡೆದುಕೊಂಡಿತ್ತು.. ಡೆವಿಲ್ ಟ್ರೈಲರ್ ನೋಡಿ ಫ್ಯಾನ್ಸ್ ಸಖತ್ ಇಷ್ಟ ಪಟ್ಟು ಥ್ರಿಲ್ ಆಗಿದ್ರು..
ಬಟ್ ಈಗಿರೋ ವಿಷ್ಯಾ ಏನಂದ್ರೆ, ಡೆವಿಲ್ ದಾಖಲೆಯನ್ನು ಕಿಚ್ಚನ ಮಾರ್ಕ್ ಮುರಿದಿದೆ..
ಅಂದಹಾಗೆ.. ಮಾರ್ಕ್ ಟ್ರೈಲರ್ ಬಿಡುಗಡೆಯಾಗಿ 22 ಗಂಟೆಯಲ್ಲೆ 1.2 ಕ್ರೋರ್ ವೀಕ್ಷಣೆಯನ್ನು ಪಡೆದುಕೊಂಡಿದೆ.. ಡೆವಿಲ್ ಟ್ರೈಲರ್ ರೀಲಿಸ್ ಆಗಿ ಇಂದಿಗೆ ಮೂರು ದಿನ ಬಟ್ ವೀಕ್ಷಣೆ ನೋಡೋದಾದ್ರೆ 1.1 ಕ್ರೋರ್ ಇದೆ.. ವೀವ್ಸ್ ನಲ್ಲಿ ಡೆವಿಲ್ ವೀಕ್ಷಣೆಯನ್ನು ಮಾರ್ಕ್ ಮೀರಿಸಿದೆ..
ಇನ್ನು.. ಡೆವಿಲ್ ಸಿನಿಮಾದಲ್ಲಿ ದರ್ಶನ್ ದ್ವೀಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಾರ್ಕ್ ನಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದೇ ಡಿಸೆಂಬರ್ 11ರಂದು ಡೆವಿಲ್ ತೆರೆಗೆ ಬರ್ತಾಯಿದ್ದು ಆದಾದ ಒಂದು ವಾರದ ಬಳಿಕ ಮಾರ್ಕ್, 45 ತೆರೆಗಪ್ಪಳಿಸಲಿದೆ..
ಒಟ್ನಲ್ಲಿ.. ಡಿಸೆಂಬರ್ ನಲ್ಲಿ ಸಿನಿರಸಿಕರಿಗೆ ಹಬ್ಬದೂಟ ಫಿಕ್ಸ್. ದಚ್ಚು ಫ್ಯಾನ್ಸ್ ಡೆವಿಲ್ ನಾ ಕಾಣ್ತುಂಬಿಕೊಳ್ಳಲು ವೇಟ್ ಮಾಡ್ತಿದ್ರೆ, ಇತ್ತ ಕಿಚ್ಚನ ಅಭಿಮಾನಿಗಳು ಮಾರ್ಕ್ ಸಿನಿಮಾ ಡೇಟ್ ನಾ ಮಾರ್ಕ್ ಮಾಡ್ಕೊಂಡು ಕಾಯ್ತಾ ಇದ್ದಾರೆ..