new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ವಿಜಯ್ ಸಾರ್ ಹತ್ರ ಒದೆ ತಿಂದ್ಮೇಲೆ..!!ರಾಕೇಶ್ ಹೇಳಿದ ಲಾರ್ಡ್ ಕಥೆ

ವಿಜಯ್ ಸಾರ್ ಹತ್ರ ಒದೆ ತಿಂದ್ಮೇಲೆ..!!ರಾಕೇಶ್ ಹೇಳಿದ ಲಾರ್ಡ್ ಕಥೆ
  • PublishedDecember 8, 2025

ಜಡೇಶ್ ಕುಮಾರ್ ಹಂಪಿ ನಿರ್ದೇಶಿಸಿರುವ ‘ಲ್ಯಾಂಡ್ ಲಾರ್ಡ್’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಈ ಚಿತ್ರದಲ್ಲಿ ಇವರು ದುನಿಯಾ ವಿಜಿ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದಲ್ಲಿ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ರಾಜ್ ಬಿ. ಶೆಟ್ಟಿ, ರಾಕೇಶ್ ಅಡಿಗ, ಭಾವನಾ ರಾವ್, ಅಭಿದಾಸ್, ಶಿಶಿರಾ ಬೈಕಾಡಿ, ರಿತನ್ಯಾ ವಿಜಯ್, ಉಮಾಶ್ರೀ ಹೀಗೆ ಅನೇಕ ಕಲಾವಿದರ ದೊಡ್ಡ ಬಳಗವೇ ಇದೆ.

ಸಮಾರಂಭದಲಿ ಸಿನಿಮಾದ ಬಗ್ಗೆ ಮಾತನಾಡಿದ ಬಿಗ್ ಬಾಸ್ ಖ್ಯಾತಿಯ ಸ್ಪರ್ದಿ, ನಟ ಹಾಗೂ ರ‍್ಯಾಪರ್ ರಾಕೇಶ್ ಅಡಿಗ ದುನಿಯಾ ವಿಜಯ್ ಹಾಗೂ ರಾಜ್ ಬಿ ಶೆಟ್ಟಿ ಇಬ್ಬರನ್ನು ಹಾಡಿ ಹೊಗಳಿದರು.

ದುನಿಯಾ ವಿಜಿ ಅವರ ಬಗ್ಗೆ ಮಾತನಾಡಿದ ಅವರು” ಅವರ ಜೊತೆ ಫೈಟ್ ಸೀನ್ ಅಲ್ಲಿ ಒಂದೆರಡು ಒದೆ ತಿನ್ನೋ ಅವಕಾಶ ಸಿಗ್ತು ಆದರೆ ನನಗೆ ಒಂದು ಚೂರು ಪೆಟ್ಟಾಗದ ಹಾಗೇ ಹೂವಿನಂತೆ ನೋಡಿಕೊಂಡರು”. ಜೊತೆಗೆ “ಈ ಸಿನಿಮಾದಿಂದ ಒಬ್ಬ ನಟ ಹೇಗಿರಬೇಕು ಅನ್ನೋದನ್ನ ದುನಿಯಾ ವಿಜಯ್ ಅವರನ್ನು ನೋಡಿ ತಿಳ್ಕೊಂಡೆ ” ಎಂದು ಹೇಳಿದರು.

ಅದರ ಜೊತೆಗೆ “ರಾಜ್ ಬಿ.ಶೆಟ್ಟಿಯವರು ಸಣ್ಣ ಪಾತ್ರಕ್ಕೂ ಜೀವ ತುಂಬುತ್ತಾರೆ” ಎಂದು ಹೇಳುತ್ತಾ ದುನಿಯಾ ವಿಜಿ ಹಾಗೂ ರಾಜ್ ಬಿ ಶೆಟ್ಟಿ ಇಬ್ಬರ ನಟನಾ ಕೌಶಲ್ಯವನ್ನು ಹೊಗಳಿದರು.

Written By
Kannada Picchar

Leave a Reply

Your email address will not be published. Required fields are marked *