ಮಾರ್ಕ್ ಕಥೆ ಬಗ್ಗೆ ಸುಳಿವು ಕೊಡ್ತು ಟ್ರೇಲರ್! ಕಿಚ್ಚ ಸಖತ್ ಮಾಸ್
By Pallavi N Raj
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಕ್ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಯ್ತು.. ಕಿಚ್ಚನ ಆಪ್ತರು, ಮಾಜಿ ಬಿಗ್ ಬಾಸ್ ಸ್ಪರ್ಧಿಗಳು, ಚಿತ್ರೋದ್ಯಮದ ಗಣ್ಯರು ಭಾಗಿಯಾಗಿ ಕಿಚ್ಚನಿಗೆ ಸಿಹಿ ಸಂದೇಶ ರವಾನಿಸಿದ್ರು..
ಯೆಸ್.. ಕಿಚ್ಚನ ಸಿನಿಮಾಗಳೆ ಹಾಗೆ ಎಲ್ಲ ಅಂಶಗಳು ಮಿಶ್ರಿತವಾಗಿರುತ್ತೆ.. ಒಂದು ವರ್ಷದ ಹಿಂದೆ ಮ್ಯಾಕ್ಸ್ ನಲ್ಲೂ ಕಿಚ್ಚ ಹೊಡೆದಿದ್ದ ಭರ್ಜರಿ ಮಾಸ್ ಡೈಲಾಗ್ ಗೆ ಫ್ಯಾನ್ಸ್ ಸಖತ್ ಥ್ರೀಲ್ ಆಗಿದ್ರು.. ಆದ್ರೆ ಮಾರ್ಕ್ ನಲ್ಲಿ ಕಿಚ್ಚ ಆ್ಯಕ್ಷನ್ ಮೂಲಕ ಅಬ್ಬರಿಸಿದ್ದಾರೆ. ಟ್ರೇಲರ್ ನೋಡಿದ ಬಳಿಕ ಮಾರ್ಕ್ ಸಿನಿಮಾ ಮೇಲಿದ್ದ ನಿರೀಕ್ಷೆ ಡಬಲ್ ಆಗಿದೆ
ಹೌದು.. ಇನ್ನೇನು ಕೆಲವೇ ದಿನಗಳಲ್ಲಿ ಮಾರ್ಕ್ ಸಿನಿಮಾ ಬಿಡುಗಡೆ ಆಗಲಿದೆ. ಕ್ರಿಸ್ಮಸ್ ದಿನವೇ ಸಿನಿಮಾ ಬರೋದು ವಿಶೇಷ ಸಿನಿಮಾ ರಿಲೀಸ್ ಮಾಡಲು ತಯಾರಿ ನಡೆದಿದೆ. ಈಗ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿದೆ. ಕಿಚ್ಚ ಸುದೀಪ್ ನಟನೆಯ ಈ ಸಿನಿಮಾ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ. ಟ್ರೇಲರ್ ನೋಡಿ ಎಲ್ಲರೂ ಮೆಚ್ಚಿಗೆ ಸೂಚಿಸಿದ್ದಾರೆ.
ಮಾರ್ಕ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಆ್ಯಕ್ಷನ್ ಅಬ್ಬರ ಇರಲಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.. ಬಿಡುಗಡೆಯಾದ 3 ಗಂಟೆಯಲ್ಲೆ 9.3 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.. ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಮೂಲಕ ಮಾರ್ಕ್ ಸಿನಿಮಾ ನಿರ್ಮಾಣ ಆಗಿದೆ. ಈ ಮೊದಲು ಇದೇ ಕಾಂಬಿನೇಷನ್ನಲ್ಲಿ ನಿರ್ಮಾಣ ಆಗಿದ್ದ ಮ್ಯಾಕ್ಸ್ ಸಿನಿಮಾ ಕೂಡ ಡಿಸೆಂಬರ್ 25ರಂದು ಬಿಡುಗಡೆ ಆಗಿ ಧೂಳೆಬ್ಬಿಸಿತ್ತು. ಈ ವರ್ಷ ಡಿಸೆಂಬರ್ 25ಕ್ಕೆ ಮಾರ್ಕ್ ಸಿನಿಮಾ ಎಲ್ಲ ಕಡೆಗಳಲ್ಲಿ ಅಬ್ಬರಿಸಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ.
ಅಂದಹಾಗೆ.. ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಮ್ಯಾಜಿಕ್ ಮಾರ್ಕ್ ಸಿನಿಮಾದಲ್ಲಿದೆ.. ಈ ಸಿನಿಮಾದ ಕಥೆ ಏನು ಎಂಬುದರ ಬಗ್ಗೆ ಟ್ರೇಲರ್ ಮೂಲಕ ಹಿಂಟ್ ಕೊಟ್ಟಿದ್ದಾರೆ..ಮಕ್ಕಳ ಅಪಹರಣದ ಕಹಾನಿಯನ್ನು ಈ ಸಿನಿಮಾ ಹೊಂದಿದೆ. ಮಕ್ಕಳನ್ನು ಕಿಡ್ನಾಪ್ ಮಾಡುವ ಕಳ್ಳರಿಗೆ ಮಾರ್ಕ್ ತಕ್ಕ ಪಾಠ ಹೇಗೆ ಕಲಿಸುತ್ತಾನೆ. ಅದು ಹೇಗೆ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಲು ಫ್ಯಾನ್ಸ್ ಕಾದು ಕುಳಿತಿದ್ದಾರೆ..
ಒಟ್ನಲ್ಲಿ.. ಸಿನಿಮಾದ ಕುರಿತು ಮಾತನಾಡಿದ ಕಿಚ್ಚ ನಮಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಸಿನಿಮಾ ಡಿಸ್ಟ್ರೀಬ್ಯೂಟರ್ಸ್ ಬಹಳ ಸಂತೋಷವಾಗಿದ್ದಾರೆ.. ನಮಗೂ ಖುಷಿ ಇದೆ ಮಾರ್ಕ್ ಮಾಡ್ಕೊಳ್ಳಿ 25ಕ್ಕೆ ಎಂದ್ರು.. ಸೋ ಅಭಿಮಾನಿಗಳು ಮಾರ್ಕ್ ಮಾಡ್ಕೊಂಡು ತೆರೆ ಮೇಲೆ ಅಬ್ಬರಿಸೋ ಕಿಚ್ಚನನ್ನು ನೋಡೋಕೆ ವೇಟ್ ಮಾಡ್ತಿದ್ದಾರೆ..