ಕಿಚ್ಚನ ಕಾಲಿಗೆ ಪೆಟ್ಟು..? ಏನಾಯ್ತು..?
ಮಾರ್ಕ್ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಏಕಾಏಕಿ ಕಾರಿಂದ ಇಳಿದು ಬರುವಾಗ ಕಿಚ್ಚ ಕಾಲಿನಲ್ಲಿ ನೋವು ಕಾಣಿಸಿಕೊಂಡ ರೀತಿ ಕಂಡಿದ್ದಾರೆ.. ಕಾಲನ್ನೂ ತುಸು ಎಳೆಯುತ್ತಾ..ಮುಟ್ಟುತ್ತಾ.. ನಡೆದು ಬಂದಿದ್ದಾರೆ.. ಇದನ್ನ ಕಂಡೊಡನೆ ಅರೇ ಇದೇನಾಯ್ತು..? ಕಿಚ್ಚನಿಗೆ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಸುದೀಪ್ ನಟನೆಯ ಸಿನಿಮಾ ‘ಮಾರ್ಕ್ ‘ ಇದೇ ಡಿಸೆಂಬರ್ 25 ರ ಕ್ರಿಸ್ಮಸ್ ಹಬ್ಬದಂದು ವಿಶ್ವದಾದ್ಯಂತ ಬಿಡುಗಡೆಯಗಲಿದೆ. ಇಂದು ಟ್ರೈಲರ್ ಲಾಂಚ್ ಆಗಲಿದೆ. ಇದರ ಸಲುವಾಗಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ಇಂದು ಆಯೋಜಿಸಿದ್ದಾರೆ..
ಚಿತ್ರದ ಸುದ್ದಿಗೋಷ್ಠಿಗೆ ಕಿಚ್ಚ ಸುದೀಪ್ ಅವರು ಈಗಾಗಲೇ ಆಗಮಿಸಿದ್ದಾರೆ. ಆದರೆ ಈಗ ಅವರು ಸುದ್ದಿಗೋಷ್ಠಿಗೆ ಎಂಟ್ರಿ ಕೊಡುವ ದೃಶ್ಯ ವೈರಲ್ ಆಗುತ್ತಿದಂತೆ ಅವರ ಅಭಿಮಾನಿಗಳು ಸುದೀಪ್ ಅವರು ಸುದ್ದಿಗೋಷ್ಠಿ ಗೆ ಕುಂಟುತ್ತಾ ಬರುವುದನ್ನು ವಿಡಿಯೋ ದಲ್ಲಿ ಗಮನಿಸಿದ್ದಾರೆ.
ಇದನ್ನು ಗಮನಿಸಿದ ಅಭಿಮಾನಿಗಳು ಶೂಟಿಂಗ್ ವೇಳೆ ಕಾಲಿಗೆ ಪೆಟ್ಟಾಗಿರಬಹುದು ಎಂದು ಭಾವಿಸಿದ್ದಾರೆ. ಆದರೆ ನಿನ್ನೆಯಷ್ಟೇ ಸುದೀಪ್ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಶೂಟ್ ಮಾಡಿದ್ದಾರೆ. ಹಾಗಾಗಿ ನಿನ್ನೆಯ ಸಂಚಿಕೆಯಲ್ಲಿ ಸುದೀಪ್ ಅವರು ಕುಂಟುತ್ತಾ ಇರಲಿಲ್ಲ. ಮತ್ತೆ ಯಾವಾಗ ಏನಾಯಿತು ಎಂದು ಅಭಿಮಾನಿಗಳು ಚಿಂತಿತರಾಗಿದ್ದಾರೆ.