ಡಿಸೆಂಬರ್ನಲ್ಲಿ ರಿಲೀಸ್ ಆಗೋ ಧಮಾಕೆದಾರ್ ಸಿನಿಮಾಗಳು ಯಾವುವು? ಇಲ್ಲಿದೆ ಪಟ್ಟಿ
By Pallavi N Raj
ಡಿಸೆಂಬರ್ ಸಿನಿರಸಿಕರಿಗೆ ಬಾಡೂಟದ ತಿಂಗಳು ಡೆವಿಲ್ ನಿಂದ ಓಪನಿಂಗ್ ಪಡೆದ ಬಳಿಕ ಯಾವೆಲ್ಲ ಚಿತ್ರಗಳು ರೀಲಿಸ್ ಆಗುತ್ತೆ ಇಲ್ಲಿದೆ ನೋಡಿ ಪಟ್ಟಿ..
ಹೌದು.. ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹೆಚ್ಚು ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿತ್ತು.. ಆದ್ರೆ ಅದೇ ಸಮಯದಲ್ಲಿ ಸರಿಯಾಗಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡುತ್ತಿದ್ದರು. ಬಟ್ IPL ನಿಂದ ಏನೋ ಈಗ ಏಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಾಗಿ ಸಿನಿಮಾಗಳು ಬಿಡುಗಡೆಯೇ ಆಗುವುದಿಲ್ಲ. ಆದರೆ ಡಿಸೆಂಬರ್, ಜನವರಿಯಲ್ಲಿ ಸಾಲು-ಸಾಲಾಗಿ ಬಿಗ್ ಬಜೆಟ್ ಸಿನಿಮಾಗಳು ಬರುತ್ವೇ ಈ ಬಾರಿ ಡಿಸೆಂಬರ್ ತಿಂಗಳಲ್ಲಂತೂ ಚಿತ್ರಮಂದಿರಗಳಲ್ಲಿ ಸಿನಿ ದೀಪಾವಳಿ ನಡೆಯಲಿದೆ.
ಯೆಸ್.. ಕನ್ನಡದಲ್ಲಿ ಮೂರು ದೊಡ್ಡ ಸಿನಿಮಾಗಳು ಡಿಸೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಮೊದಲಿಗೆ ಡಿಬಾಸ್ ದರ್ಶನ್ ಅಭಿನಯದ ಡೆವಿಲ್ ಡಿಸೆಂಬರ್ 11ಕ್ಕೆ ತೆರೆಗಪ್ಪಳಿಸಿದ್ರೆ, ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಲಿರುವ 45 ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ.
ಅಫ್ ಕೋರ್ಸ್.. ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಸಹ ಇದೇ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾ ಸಹ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದೆ. ಸಿನಿಮಾದ ಟ್ರೈಲರ್ ಇಂದು ರೀಲಿಸ್ ಆಗುತ್ತೆ..
ಅಂದಹಾಗೆ.. ಡ್ಯೂಡ್, ಲವ್ ಟುಡೆ, ಡ್ರ್ಯಾಗನ್, ಸಿನಿಮಾಗಳ ಮೂಲಕ ಸೂಪರ್ ಹಿಟ್ ನೀಡಿರುವ ಪ್ರದೀಪ್ ರಂಗನಾಥನ್ ನಟನೆಯ ಲವ್ ಇನ್ಶುರೆನ್ಸ್ ಕಂಪೆನಿ ಸಿನಿಮಾ ಸಹ ಇದೇ ತಿಂಗಳು ಡಿಸೆಂಬರ್ 18ಕ್ಕೆ ತೆರೆಗೆ ಬರುತ್ತಿವೆ. ಇದರ ಜೊತೆಗೆ ಇನ್ನೂ ಕೆಲ ಸಿನಿಮಾಗಳು ಈ ತಿಂಗಳು ಬಿಡುಗಡೆ ಆಗಲಿದೆ.
ಅಂದಹಾಗೆ.. ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ 2 ಸಿನಿಮಾ ನಿನ್ನೆಯೇ ಡಿಸೆಂಬರ್ 05 ಆದರೆ ಬಿಡುಗಡೆ ರದ್ದಾಗಿದ್ದು, ಇದೇ ತಿಂಗಳ ಅಂತ್ಯದಲ್ಲಿ ಅಂದರೆ ಕ್ರಿಸ್ಮಸ್ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ..
ಇನ್ನೂ.. ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ ಹಾಗೂ ಇತರರು ನಟಿಸಿರುವ ತೂ ಮೇರಿ ಮೇ ತೆರಾ, ಮೇ ತೇರಿ, ತೂ ಮೇರ ಸಿನಿಮಾ ಸಹ ಇದೇ ತಿಂಗಳು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರಲಿದೆ.
ಒಟ್ನಲ್ಲಿ.. ಸಿನಿಮಾ ಪ್ರೇಮಿಗಳು ಚಿತ್ರದ ರಸಮಂಜರಿ ಸವಿಯೋದಕ್ಕೆ ರೆಡಿಯಾಗಿರಿ..