ಇಂದಿನಿಂದ ಡೆವಿಲ್ ಟಿಕೆಟ್ ಬುಕ್ಕಿಂಗ್ ಶುರು
ಬಾಕ್ಸ್ ಆಫಿಸ್ ಸುಲ್ತಾನ್ ದರ್ಶನ್ ಅವರ ಡೆವಿಲ್ ಸಿನಿಮಾ ಇದೆ ಗುರುವಾರ ತೆರೆಯಲ್ಲಿ ಬಿಡುಗಡೆ ಆಗಲಿದೆ.ಇದರ ಸಲುವಾಗಿ ಅಭಿಮಾನಿಗಳು ಬುಕಿಂಗ್ ಯಾವಾಗ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದರು.
ಇದೀಗ ಈ ಕಾತುರಕ್ಕೆ ಸಿನಿಮಾ ತಂಡ ಅಂತ್ಯ ಹಾಡಿದೆ.ಇವತ್ತು ಮಧ್ಯಾಹ್ನ 1.05 ಕ್ಕೆ ಸಿನಿಮಾದ ಮುಂಗಡ ಬುಕ್ಕಿಂಗ್ ಓಪನ್ ಆಗಲಿದೆ ಎಂದು ಹೇಳಿಕೊಂಡಿದ್ದಾರೆ.
ಈಗಾಗಲೇ ಚಿತ್ರದ ಟ್ರೈಲರ್ ಸಕ್ಕತ್ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಸಿನಿಮಾ ನೋಡಲು ಕಾತುರರಾಗಿದ್ದಾರೆ.