News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕನ್ನಡ ಚಿತ್ರರಂಗಕ್ಕೆ ‘ಡಿಸೆಂಬರ್’ ಅದೃಷ್ಟ..! ಇತಿಹಾಸ ಹೇಳೋದೇನು..?

ಕನ್ನಡ ಚಿತ್ರರಂಗಕ್ಕೆ ‘ಡಿಸೆಂಬರ್’ ಅದೃಷ್ಟ..! ಇತಿಹಾಸ ಹೇಳೋದೇನು..?
  • PublishedDecember 5, 2025

ಡಿಸೆಂಬರ್ ಕನ್ನಡ ಚಿತ್ರ ರಂಗಕ್ಕೆ ಡಿಸೆಂಬರ್ ಅದೃಷ್ಟದ ತಿಂಗಳು ಅಂದ್ರೆ ತಪ್ಪಾಗಲ್ಲ. ಯಾಕೆ? ಹೇಗೆ? ಅನ್ನೋದಕ್ಕೆ ವಿವರಣೆ ಇಲ್ಲಿದೆ.

ಕಳೆದ ಎರಡು ವರ್ಷಗಳಿಂದ ಸ್ಯಾಂಡಲ್ ವುಡ್ ಅಲ್ಲಿ ಸ್ಟಾರ್ಸ್ ಗಳ ಸಿನಿಮಾಗಳು ಡಿಸೆಂಬರ್ ಅಲ್ಲೇ ಬಿಡುಗಡೆ ಆಗ್ತಿವೆ.ಬಿಡುಗಡೆ ಆಗಿರೋ ಎಲ್ಲಾ ಸೂಪರ್ ಸ್ಟಾರ್ ಸಿನಿಮಾಗಳು ಬ್ಲಾಕ್ ಬಸ್ಟರ್ ಕೂಡ ಆಗಿದೆ.

2022-2024 ಡಿಸೆಂಬರ್ ನಲ್ಲಿ ಬಿಡುಗಡೆಯಾದ ಯಶಸ್ವಿ ಚಿತ್ರಗಳು

ವೇದ ( 2022)

ಡಿಸೆಂಬರ್ 23 ರಂದು ಶಿವರಾಜ್ ಕುಮಾರ್ ನಟನೆಯ 125 ನೇ ಸಿನಿಮಾ ಇದಾಗಿದ್ದು, ಬಾಕ್ಸ್ ಆಫೀಸ್ ಅಲ್ಲಿ ಸುಮಾರು 20 ರಿಂದ 30 ಕೋಟಿಯಷ್ಟು ಕಲೆಕ್ಷನ್ ಮಾಡಿ 2022 ರಲ್ಲಿ ಬಿಡುಗಡೆಯಾದ ಯಶಸ್ವೀ ಚಿತ್ರಗಳಲ್ಲಿ ಒಂದು ಎಂದೆನಿಸಿಕೊಂಡಿತ್ತು.

ಕಾಟೇರ (2023)

ದರ್ಶನ್ ನಟಿಸಿರುವ ಕಾಟೆರಾ ಚಿತ್ರವು ಡಿಸೆಂಬರ್ 29 ರಂದು ಬಿಡುಗಡೆಗೊಂಡಿತ್ತು. ಈ ಸಿನಿಮಾವು ಬರೋಬ್ಬರಿ 200₹ ಕೋಟಿಗೂ ಅಧಿಕ ಕಲೆಕ್ಷನ್ ಕಂಡು,2023 ರಲ್ಲಿ ಬಿಡುಗಡಯಾದ ಸಿನಿಮಾಗಳಲ್ಲಿ ಒಂದು.

ಯುಐ (2024)

ಕನ್ನಡದ ಬುದ್ದಿವಂತ ನಿರ್ದೇಶಕ ಅಂದ್ರೆ ಉಪ್ಪಿ, ಪ್ರೇಕ್ಷಕರಿಗೆ ತಲೇಲಿ ಹುಳ ಬಿಡೋ ಏಕೈಕ ನಿರ್ದೇಶಕ ಇವರು. ಸುಮಾರು 9 ವರ್ಷಗಳ ನಂತರ ಉಪೇಂದ್ರ ಅವರು ನಿರ್ದೇಶನ ಮಾಡಿದ್ದ ಈ ಸಿನಿಮಾ ವಿಶ್ವಾದಾದ್ಯಂತ ಸುಮಾರು 50 ರಿಂದ 60₹ ಕೋಟಿಯಷ್ಟು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿತ್ತು.

ಮ್ಯಾಕ್ಸ್ (2024)

ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರವು 2024 ರ ಡಿಸೆಂಬರ್ 25 ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಿತು.ಒಟ್ಟಾರೆಯಾಗಿ 50 ರಿಂದ 65 ಕೋಟಿಯವರೆಗೆ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಸಿನಿಮಾವಾಗಿತ್ತು.ಹಾಗಾಗಿ ಡಿಸೆಂಬರ್ ಒಂದು ರೀತಿಯಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಅದೃಷ್ಟವೆಂಬ ನಂಬಿಕೆ.

ಇದೀಗ ಮತ್ತೆ ಕನ್ನಡ ಚಲನಚಿತ್ರ ರಂಗದ ಸೂಪರ್ ಸ್ಟಾರ್ಸ್ ಗಳ ಚಿತ್ರಗಳು ಡಿಸೆಂಬರ್ ಗೆ ಥೀಯೇಟರ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಒಂದು ವೇಳೆ ಈ ಬಾರಿಯು 3 ಮೂವಿಗಳು ಹಿಟ್ ಆದಲ್ಲಿ ಡಿಸೆಂಬರ್ ಪಕ್ಕ ಲಕ್ಕಿ ತಿಂಗಳು ಅನ್ನೋ ಊಹೆಗೆ ಬಲ ಬಂದಂತಾಗುತ್ತದೆ.

Written By
Kannada Picchar

Leave a Reply

Your email address will not be published. Required fields are marked *