18 ವರ್ಷದ ನಂತರ ದರ್ಶನ್ ಜೊತೆಗೆ ಲಂಡನ್ ಬೆಡಗಿ ಶರ್ಮಿಳಾ
ಡಿಸೆಂಬರ್ 11ಕ್ಕೆ ವಿಶ್ವಾದಾದ್ಯಂತ ಬಿಡುಗಡೆ ಸಜ್ಜಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಬಹುನಿರೀಕ್ಷಿತ ಸಿನಿಮಾ ‘ಡೆವಿಲ್ ‘ ಸುದ್ದಿಗೋಷ್ಠಿ ಬೆಂಗಳೂರಿನ ಶೆರಟಾನ್ ಹೋಟೆಲ್ ನಲ್ಲಿ ನಡೆಯಿತು.
ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶರ್ಮಿಳಾ ಮಾಂಡ್ರೆ ಯವರು ಚಿತ್ರದ ಬಗ್ಗೆ ಮಾಧ್ಯಮದವರೊಡನೆ ಮಾತನಾಡುವ ಸಂದರ್ಭದಲ್ಲಿ 18 ವರ್ಷದ ಬಳಿಕ ಮತ್ತೆ ದರ್ಶನ್ ಅವರ ಜೊತೆಗೆ ಕೆಲ್ಸ ಮಾಡ್ತಿರೋದು ಬಹಳ ಖುಷಿ.ಒಂದು ಸಣ್ಣದಾದ ವಿಶೇಷ ಪಾತ್ರ ಆದ್ರೂ ಒಳ್ಳೆ ಇಂಪಾಕ್ಟಫುಲ್ ಪಾತ್ರ ಎಂದು ಲಂಡನ್ ಬೆಡಗಿ ಶರ್ಮಿಳಾ ಮಾಂಡ್ರೆ ಹೇಳಿಕೊಂಡಿದ್ದಾರೆ.
ನವಗ್ರಹ
2008 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಫಿಲಂ ಎಂದರೆ ನವಗ್ರಹ. ಅಂಬಾರಿ ಕದಿಯುವ ಸುತ್ತ ನಡೆಯುವ ಈ ಚಿತ್ರದಲ್ಲಿ ಕಿರಣ್ ಎನ್ನುವ ಪಾತ್ರದ ಮೂಲಕ ದರ್ಶನ್ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು.
ಇದೀಗ ತಮ್ಮ ಪಾತ್ರದ ಸಣ್ಣ ಕುರುಹನ್ನು ಬಿಟ್ಟುಕೊಡದೆ, ಸಿನಿಮಾದಲ್ಲೆ ಪಾತ್ರದ ಬಗ್ಗೆ ತಿಳಿಯುತ್ತದೆ ಎಂದು ಶರ್ಮಿಳಾ ಮಾಂಡ್ರೆ ತಿಳಿಸಿದ್ದಾರೆ.