News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ UPDATE

ಶಾರುಖ್ ಖಾನ್ ಮಗನಿಗೆ ‘ಕಲ್ಟ್’ ತೋರಿಸಿದ ಝೈದ್ ಖಾನ್

ಶಾರುಖ್ ಖಾನ್ ಮಗನಿಗೆ ‘ಕಲ್ಟ್’ ತೋರಿಸಿದ ಝೈದ್ ಖಾನ್
  • PublishedDecember 1, 2025

ಜಮೀರ್ ಖಾನ್ ಮಗ ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಾಸುಪಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಕಲ್ಟ್ ‘ ಮೂವಿಯು 2026 ರ ಜನವರಿ 23 ರಂದು ರಿಲೀಸ್ ಆಗಲಿದೆ.ಸಿನಿಮಾದ ಬಗ್ಗೆ ಹೆಚ್ಚು ನಿರೀಕ್ಷೆ ಇದ್ದು,ಇದೀಗ ಕಥಾ ನಾಯಕ ಝೈದ್ ಖಾನ್ ಹಾಗೂ ಕಿಂಗ್ ಖಾನ್ ಶಾರುಖ್ ಖಾನ್ ಮಗ ಹಾಗೂ ಉದಯೋನ್ಮುಖ ನಿರ್ದೇಶಕ ಆರ್ಯನ್ ಖಾನ್ ಅವರ ಜೊತೆಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಹೌದು, ‘ಡಿ’ಯಾವೋಲ್ ಆಫ್ಟರ್ ಡಾರ್ಕ್ ನ ಕೋ ಫೌಂಡರ್ ಆಗಿರುವ ಆರ್ಯನ್ ಖಾನ್ ನವೆಂಬರ್ 29 ರಂದು ಬೆಂಗಳೂರಿನ ಕೇವೋರ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಸಮಯದಲ್ಲಿ ಭೇಟಿ ಆದಾಗ ಝೈದ್ ಖಾನ್ ತಮ್ಮ ಬಹು ನಿರೀಕ್ಷಿತ ಫಿಲಂ ‘ಕಲ್ಟ್ ‘ ನ ತುಣುಕನ್ನು ತೋರಿಸಿದ ದೃಶ್ಯ ಸದ್ಯಕ್ಕೆ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ.

ಈಗಾಗಲೇ ಚಿತ್ರದ ಹಾಡದ ‘ಅಯ್ಯೋ ಶಿವನೇ ‘ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಟ್ರೆಂಡಿಗ್ ಅಲ್ಲಿ ಇದ್ದು ಸದ್ಯಕ್ಕೆ ಸಿನಿಮಾದ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *