‘ಕಿಚ್ಚ’ ಮಾರ್ಕ್ Massive Update
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಫಿಲಂ ಡಿಸೆಂಬರ್ 25 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ವಿಜಯ್ ಕಾರ್ತಿಕೇಯ ಅವರು ನಿರ್ದೇಶಿಸಿರುವ ಈ ಫಿಲಂ ನಲ್ಲಿ ಸುದೀಪ್ ಅವರ ಮಾಸ್ ಲುಕ್ ಹಾಗೂ ‘ಸೈಕೋ ಸೈತಾನ್’ ಸಾಂಗ್ ಗೆ ಅಭಿಮಾನಿಗಳು ಈಗಾಗಲೇ ಫಿದಾ ಆಗಿದ್ದಾರೆ.
ಇದೀಗ ಸುದೀಪ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ‘ಮಾರ್ಕ್’ ಚಿತ್ರದ ಇನ್ನೊಂದು ಅಪ್ಡೇಟ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಖಾತೆಯಲ್ಲಿ ಮಾರ್ಕ್ ಚಿತ್ರದ ಟ್ರೈಲರ್ ಹಾಗೂ ಅದ್ಬುತವಾದ ಹಾಡೊಂದು ಬರಲಿದೆ ಎನ್ನುವ ಸುದ್ದಿಯನ್ನು ತಿಳಿಸಿದ್ದಾರೆ.
ಸುದೀಪ್ ಅವರು ಸಹ ನಿರ್ಮಾಪಕರಾಗಿರುವ ಒಂದು ಆಕ್ಷನ್ ಪ್ಯಾಕ್ಡ್ ಥ್ರಿಲರ್ ಸಿನಿಮಾ ಇದಾಗಿದ್ದು, ಸಿನಿಮಾದ ಬಗ್ಗೆ ಫ್ಯಾನ್ಸ್ ಗಳಿಗೆ ಕುತೂಹಲ ಹೆಚ್ಚಾಗಿದೆ.
ಕಿಚ್ಚ ಹಾಗೂ ವಿಜಯ್ ಕಾರ್ತಿಕೇಯ ಕಾಂಬೊ
ವಿಜಯ್ ಕಾರ್ತಿಕೇಯ ಅವರು ಸುದೀಪ್ ಅವರಿಗೆ ನಿರ್ದೇಶನ ಮಾಡುತ್ತಿರುವ ಎರಡನೇ ಫಿಲಂ ಮಾರ್ಕ್. ಇದಕ್ಕೂ ಮುಂಚೆ ‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್ ಅವರೇ ಆಕ್ಷನ್ ಕಟ್ ಹೇಳಿದ್ದರು. ಇದೀಗ ಇಬ್ಬರ ಕಾಂಬಿನೇಶನ್ ನ ಎರಡನೇ ಚಿತ್ರ ‘ಮಾರ್ಕ್’ ಆಗಿದೆ.
ಸುದೀಪ್ ಪಾತ್ರ
ಈ ಚಿತ್ರದಲ್ಲಿ ಸುದೀಪ್ ಅವರು ಅಜೇಯ್ ಮಾರ್ಕಾಂಡೆಯ ಎನ್ನುವ ಪೊಲೀಸ್ ರೋಲ್ ಅನ್ನು ನಿರ್ವಹಿಸಿದ್ದು, ಸುದೀಪ್ ಫಿಲಂ ನಲ್ಲಿ ಅವರ ಗತ್ತು ಗಮ್ಮತ್ತನು ನೋಡಲು ಕಿಚ್ಚನ ಅಭಿಮಾನಿಗಳು ಕಾತುರತೆಯಿಂದ ಪ್ರತಿ ಬಾರಿ ಕಾಯುತ್ತಾರೆ. ಅದೇ ರೀತಿ ಈ ಬಾರಿಯು ‘ಮಾರ್ಕ್’ ಸಿನಿಮಾಗಾಗಿ ಉತ್ಸುಕರಾಗಿದ್ದಾರೆ.