‘ಡೆವಿಲ್’ ನೆಗೆಟಿವ್ ಶೇಡ್ ನಲ್ಲಿ ಚಂದು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಲು ಕಾತುರ ಸಿನಿಮಾ ‘ಡೆವಿಲ್ ‘ ಡಿಸೆಂಬರ್ 12 ರಂದು ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಮೋಷನ್ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಹಾಗೂ ಚಿತ್ರ ತಂಡ ದಿಂದ ಬರದಿಂದ ನಡೆಯುತ್ತಿದೆ. ಈ ಚಿತ್ರದಲ್ಲಿ ಕಲಾವಿದರ ದೊಡ್ಡ ಬಳಗವೇ ಇದ್ದು, ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದು ಗೌಡ ಕೂಡ ಇದರಲ್ಲಿ ನಟಿಸಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಕನ್ನಡ ಪಿಚ್ಚರ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು “ಈ ಚಿತ್ರದಲ್ಲಿ ನಾನು ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದೀನಿ,ನನ್ನ ಪಾತ್ರವನ್ನು ಬಹಳ ಬೃಟಲ್ ಆಗಿ ತೋರಿಸಿದ್ದಾರೆ.ಅದೇ ರೀತಿ ಈ ಸಿನಿಮಾದಿಂದ ಇನ್ನು ಅನೇಕ ಅವಕಾಶಗಳು ನನಗೆ ದೊರೆಯುತ್ತದೆ ಎಂಬ ನಂಬಿಕೆ ಇದೆ” ಎಂದು ಹೇಳಿಕೊಂಡಿದ್ದಾರೆ.
ದರ್ಶನ್ ಜೊತೆ ಎರಡನೇ ಸಿನಿಮಾ
ಚಂದು ಗೌಡ ಅವರು ಇದೇನು ಮೊದಲ ಬಾರಿಗೆ ದರ್ಶನ್ ಅವರ ಸಿನಿಮಾಗೆ ಬಣ್ಣ ಹಚ್ಚಿರುವುದಲ್ಲ. ಇದರ ಮೊದಲು ರಾಬರ್ಟ್ ಚಿತ್ರದಲ್ಲಿ ನಟಿಸಿರುವ ಇವರು ಒಂದೊಳ್ಳೆ ಪಾತ್ರದ ಜೊತೆ ಮತ್ತೆ ದರ್ಶನ್ ಅವರ ಜೊತೆ ತೆರೆ ಮೇಲೆ ಬರುತ್ತಿದ್ದಾರೆ.
ಈಗಾಗಲೇ ಚಿತ್ರದ ಟ್ರೈಲರ್, ಹಾಡುಗಳು ಸಕ್ಕತ್ ವೈರಲ್ ಆಗಿದ್ದು ಈ ಬಾರಿಯ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಆಗುವ ಎಲ್ಲ ಲಕ್ಷಣ ಗಳು ಕಾಣುತ್ತಿದೆ.