News

“ಗತವೈಭವ” ಸಾರಲು ರೆಡಿಯಾದ ಸಿಂಪಲ್‌ ಸುನಿ

“ಗತವೈಭವ” ಸಾರಲು ರೆಡಿಯಾದ  ಸಿಂಪಲ್‌ ಸುನಿ
  • PublishedFebruary 28, 2022

ಸ್ಯಾಂಡಲ್ ವುಡ್ ನಲ್ಲಿ ಸಿಂಪಲ್ ಕಥೆಯಲ್ಲಿ ತೆರೆ ಮೇಲೆ ತಂದು ಮ್ಯಾಜಿಕ್ ಮಾಡಿ ಪ್ರೇಕ್ಷಕರಿಗೆ ಮನೋರಂಜನೆಯ ಚಮಕ್ ಕೊಟ್ಟ ನಿರ್ದೇಶಕ‌ ಸಿಂಪಲ್ ಸುನಿ ..ತನ್ನದೇ ವಿಭಿನ್ನ ಶೈಲಿಯ ಮೂಲಕ ಪ್ರೇಕ್ಷಕರನ್ನ ಇಂಪ್ರೇಸ್ ಮಾಡಿ ಸಕ್ಸಸ್ ಕಂಡಿರೋ‌ ಸುನಿ ಈಗ ಹೊಸ ಪ್ರತಿಭೆ ಜೊತೆ ಗತವೈಭವ ಸಾರಲು ಸಿದ್ದರಾಗಿದ್ದಾರೆ…

ಗತವೈಭವ ..ಸಿಂಪಲ್ ಸುನಿ ನಿರ್ದೇಶನದ ಮುಂದಿನ ಸಿನಿಮಾ‌..ಈಗಾಗಲೇ ಟೈಟಲ್ ಮೂಲಕ ಪ್ರೇಕ್ಷಕತನ್ನ ಗಮನ ಸೆಳೆದಿದ್ದ ಈ ಸಿನಿಮಾದ ಬಗ್ಗೆ ಸುನಿ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ..ಸದ್ಯ ಗತವೈಭವ ಸಿನಿಮಾದ ನಾಯಕನನ್ನ ಪ್ರೇಕ್ಷಕರಿಗೆ ಪರಿಚಯಿಸಲು ಸುನಿ ಸಿದ್ದರಾಗಿದ್ದು ಅದಕ್ಕಾಗಿ ವಿಭಿನ್ನವಾಗಿರೋ ಟೀಸರ್ ಬಿಡುಗಡೆ ಮಾಡಿದ್ದಾರೆ…

ಸಾಮಾನ್ಯವಾಗಿ ಹೀರೋ ಅಂದ್ರೆ ಏನೆಲ್ಲಾ ಕ್ವಾಲಿಟಿ ಇರಬೇಕು ಅನ್ನೋ ಪ್ರೇಕ್ಷಕರ ಪಲ್ಸ್ ತಿಳಿದುಕೊಂಡಿರೋ ಸುನಿ ಟೀಸರ್ ನಲ್ಲಿ ಆ ಎಲ್ಲಾ ಅಂಶಗಳನ್ನ ಕಟ್ಟುಕೊಟ್ಟಿದ್ದಾರೆ..ಇನ್ನು ನಾಯಕ ದುಷ್ಯಂತ್ ಅವ್ರಿಗೆ ಇದು ಚೊಚ್ಚಲ ಸಿನಿಮಾ ಆಗಿದ್ದು ದುಷ್ಯಂತ್ ಭರ್ಜರಿ ತಯಾರಿ ಮಾಡಿಕೊಂಡೇ ಇಂಡಸ್ಟ್ರಿ ಗೆ ಕಾಲಿಡುತ್ತಿದ್ದಾರೆ ಅನ್ನೋ ಸುಳಿವು ಕೂಡ ಕೊಟ್ಟಿದ್ದಾರೆ ಸಿಂಪಲ್ ಸುನಿ .

ಗತವೈಭವ ಸಿನಿಮಾಗೆ ದೀಪಕ್ ತಿಮ್ಮಪ್ಪ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದು ,ವಿಲಿಯಂ ಡೇವಿಡ್ ಛಾಯಾಗ್ರಹಣ..ಶಿವಕುಮಾರ್ ಕಲಾ‌ನಿರ್ದೇಶನ, ಆಶಿಕ್ ಎಡಿಟಿಂಗ್, ನಿರ್ಮಾಲ್ ಕುಮಾರ್ ಅವ್ರ ವಿ ಎಫ್ ಎಕ್ಸ್ ಸುಪ್ರವೈಸರ್ ,ಚೇತನ್ ಡಿಸೋಜಾ ಸ್ಟಂಟ್ ನಿರ್ದೇಶನ ,ಭರತ್ ಬಿಜೆ ಮ್ಯೂಸಿಕ್ ಹಾಗೂ ವರ್ಷಿಣಿ ಜಾನಕಿರಾಮ್ ಕಾಸ್ಟ್ಯೂಮ್ ಡಿಸೈನರ್ ಚಿತ್ರಕ್ಕಿದೆ..

ಸದ್ಯ ಹೀರೋ ಇಂಟ್ರಡಕ್ಷನ್ ಗಾಗಿ ಬಿಡುಗಡೆ ಆಗಿರೋ ಟೀಸರ್ ಸಖತ್ ಕಿಕ್ ಕೊಡುತ್ತಿದ್ದು ಟೀಸರ್ ಮಧ್ಯೆ ಸುನಿ ಸ್ಟೈಲ್ ಆಫ್ ಕಾಮಿಡಿ ಪ್ರೇಕ್ಷಕರಿಗೆ ಇಷ್ಟವಾಗ್ತಿದೆ.. ಸುನಿ ಈ ಭಾರಿ ಎಕ್ಸ್ ಪೆರಿಮೆಂಟಲ್ ಹಾಗೂ ಪಕ್ಕಾ ಎಂಟರ್ಟೈನ್ಮೆಂಟ್ ವಿತ್ ಕಮರ್ಷಿಯಲ್ ಸಬ್ಜೆಕ್ಟ್ ತೆಗೆದುಕೊಂಡು ಸಿನಿಮಾ‌ ಪ್ರೇಕ್ಷರ ಮುಂದೆ ಬರಲಿದ್ದಾರೆ….ಸಾಕಷ್ಟು ಮುತುವರ್ಜಿ ವಹಿಸಿ ಗತವೈಭವವನ್ನ ಕೈಗೆತ್ತಿಕೊಂಡಿರೋ ಸುನಿ ಸಕ್ಸಸ್ ಗಂಟೆ ಬರಿಸೋಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ…ಈ ಚಿತ್ರದ ಮೂಲಕ ಇಂಡಸ್ಟ್ರಿಗೆ ದುಷ್ಯಂತ್ ಎಂಬ ಭರವಸೆಯ ನಾಯಕ ಕೂಡ ಸಿಗಲಿದ್ದಾರೆ…

Written By
Kannadapichhar

Leave a Reply

Your email address will not be published. Required fields are marked *