News

ರಾ ಸಬ್ಜೆಕ್ಟ್ ಜೊತೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಿದ್ದನಾದ ಸಲಗ !

ರಾ ಸಬ್ಜೆಕ್ಟ್ ಜೊತೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಿದ್ದನಾದ ಸಲಗ !
  • PublishedFebruary 24, 2022

ಸ್ಯಾಂಡಲ್ ವುಡ್ ನ ಸಲಗ ,ಕರಿಚಿರತೆ ದುನಿಯಾ ವಿಜಯ್ ನಟನೆಗೂ ಸೈ ಹಾಗು ನಿರ್ದೇಶನಕ್ಕೂ ಸೈ ಎಂಬುದನ್ನು ನಿರೂಪಿಸಿದ್ದಾರೆ ಸಲಗ ಸಿನಿಮಾ ನಿರ್ದೇಶನ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ದುನಿಯಾ ವಿಜಯ್ ಈಗ ಮತ್ತೊಮ್ಮೆ ಡೈರೆಕ್ಷನ್ ಕ್ಯಾಪ್ ತೊಡಲು ಸಿದ್ದರಾಗಿದ್ದಾರೆ ..

ಹೌದು ದುನಿಯಾ ವಿಜಯ್ ಅಭಿನಯದ ಇಪ್ಪತ್ತೆಂಟನೇ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.. ಈಗಾಗಲೇ ಸಿನಿಮಾದ ಪೋಸ್ಟರ್ ರಿವಿಲ್ ಮಾಡಿರುವ ದುನಿಯಾ ವಿಜಯ್ ಶೀಘ್ರದಲ್ಲೇ ಸಿನಿಮಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ತಿಳಿಸಿದ್ದಾರೆ …

ಸದ್ಯ ರಿವೀಲ್ ಆಗಿರುವ ಪೋಸ್ಟರ್ ನೋಡ್ತಿದ್ರೆ ಇದೊಂದು ರಾ ಸಬ್ಜೆಕ್ಟ್ ಅನ್ನೋದು ತಿಳಿಯುತ್ತದೆ.. ಇನ್ನು ಪೋಸ್ಟರ್ ನಲ್ಲಿ ರಕ್ತ ಅಂಟಿರುವ ಕೈ ಇದ್ದು ಹಾಗೂ ಯಮಹ ಬೈಕನ್ನು ಬಳಸಲಾಗಿದೆ ..ಪೋಸ್ಟರ್ ನಲ್ಲಿ ನಿರ್ಮಾಪಕರ ಹೆಸರನ್ನು ಮಾತ್ರ ಹಾಕಿದ್ದು, ದುನಿಯಾ ವಿಜಯ್ ಆದಷ್ಟು ಬೇಗ ಸಿನಿಮಾದ ಬಗ್ಗೆ ಗುಟ್ಟು ಬಿಟ್ಟು ಕೊಡುವುದಾಗಿ ಹೇಳಿದ್ದಾರೆ… ಪೋಸ್ಟರ್ ನಿಂದಾಗಿ‌ಈಗಾಗಲೇ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ..

ದುನಿಯಾ ವಿಜಿ ಅವರ 28 ಸಿನಿಮಾವನ್ನ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡುತ್ತಿದ್ದು, ಸಿನಿಮಾವನ್ನ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಲಿದ್ದಾರಂತೆ …ಸಲಗ ಸಿನಿಮಾದಲ್ಲಿ ತಮ್ಮ‌ ನಿರ್ದೇಶನದ ಟ್ಯಾಲೆಂಟ್‌ ತೋರಿದ್ದ ವಿಜಿ ಈ ಭಾರಿ ಯಾವ ರೀತಿ ಕಥೆ ತರಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲಿಯೂ ಮೂಡಿದೆ ..

Written By
Kannadapichhar

Leave a Reply

Your email address will not be published. Required fields are marked *