ಅಮೂಲ್ಯ ಸೀಮಂತಕ್ಕೆ ರಮ್ಯಾ ಕೊಟ್ಟ ಗಿಫ್ಟ್ ಏನು ಗೊತ್ತಾ ?
ಸ್ಯಾಂಡಲ್ ವುಡ್ ನ ಗೋಲ್ಡನ್ ಗರ್ಲ್ ನಟಿ ಅಮೂಲ್ಯ ತಾಯಿಯಾಗುತ್ತಿದ್ದಾರೆ…ತುಂಬು ಗರ್ಭಿಣಿಯಾಗಿರುವ ಅಮೂಲ್ಯ ಅವರಿಗಾಗಿ ಇತ್ತೀಚೆಗಷ್ಟೇ ಅವರ ಪತಿ ಜಗದೀಶ್ ಚಂದ್ರ ಅವರು ಅದ್ದೂರಿಯಾದ ಬೇಬಿ ಶವರ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು… ಇಡೀ ಚಿತ್ರರಂಗದ ಗಣ್ಯರೆಲ್ಲ ಕರೆದು ಅಮೂಲ್ಯ ಅವರಿಗೆ ಸರ್ ಪ್ರೈಸ್ ನೀಡಿದ್ದರು …

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ತಾಜ್ ವೆಸ್ಟೆಂಡ್ ನಲ್ಲಿ ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು …ಸಾಕಷ್ಟು ದಿನಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ರಮ್ಯಾ ಸಹ ಕಾರ್ಯಕ್ರಮಕ್ಕೆ ಹಾಜರಾಗಿ ಎಲ್ಲರಿಗೂ ಆಶ್ಚರ್ಯ ತರಿಸಿದರು..

ಬಹಳ ದಿನಗಳ ನಂತರ ಅಮೂಲ್ಯ ರನ್ನ ಭೇಟಿ ಮಾಡಿದ ನಟಿ ರಮ್ಯಾ ಸಖತ್ ಸಿಂಪಲ್ ಆಗಿ ಸಾದಾಸೀದ ಲುಕ್ ನಲ್ಲಿ ಕಾರ್ಯಕ್ರಮನ ಅಟೆಂಡ್ ಮಾಡಿದ್ರು…ಇನ್ನು ರಮ್ಯಾ, ಅಮೂಲ್ಯ ಅವರಿಗೆ ಬ್ಯೂಟಿಫುಲ್ಲಾಗಿ ಆಗಿರುವ ಉಡುಗೊರೆಯೊಂದನ್ನು ನೀಡಿದ್ದಾರೆ… ಅದೇನಪ್ಪಾ ಅಂದ್ರೆ ರೇಷ್ಮೆ ಸೀರೆ…ಈ ವಿಚಾರವನ್ನ ಅಮೂಲ್ಯ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ…ಮುದ್ದಾದ ಉಡುಗೊರೆ ನೀಡಿ ಇನ್ನು ಕೆಲವೇ ದಿನಗಳಲ್ಲಿ ಅಮೂಲ್ಯ ಮಡಿಲು ತುಂಬುವ ಮುದ್ದು ಕಂದಮ್ಮನಿಗೆ ಶುಭ ಹಾರೈಸಿದ್ದಾರೆ…
