News

ಅರ್ಜುನ್ ಸರ್ಜಾ ತೋಳಲ್ಲಿ ಅಪ್ಪು..!

ಅರ್ಜುನ್ ಸರ್ಜಾ ತೋಳಲ್ಲಿ ಅಪ್ಪು..!
  • PublishedDecember 9, 2021

ದಕ್ಷಿಣ ಭಾರತ ಖ್ಯಾತ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಪುನೀತ್ ರಾಜ್ ಕುಮಾರ್ ಜೊತೆ ಕ್ಲಿಕ್ಕಿಸಿಕೊಂಡಿರುವ ಬಾಲ್ಯದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಪ್ಪು ಅನ್ನು ನೆನಪಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ದಿನಗಳೇ ಕಳೆಯುತ್ತಿದ್ದರೂ, ಅಪ್ಪು ನೆನೆಪು ಮಾತ್ರ ಜನರ ಮನದಿಂದ ದೂರಾಗುತ್ತಿಲ್ಲ. ಅಪ್ಪು ನಿಧನದಿಂದ ಪುನೀತ್ ಅಭಿಮಾನಿಗಳು ಹಾಗೂ ಕುಟುಂಬದವರು ದುಃಖದ ಮಡುವಿನಲ್ಲಿದ್ದಾರೆ.

ಈ ಮಧ್ಯೆ ಸ್ಯಾಂಡಲ್‍ವುಡ್‍ನ ಹಲವಾರು ಕಲಾವಿದರೂ ಅಪ್ಪುವಿನ ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪುನೀತ್‍ರನ್ನು ಸ್ಮರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕ ಸಂತೋಷ್ ಆನಂದ್ ರಾಮ್, ಅಪ್ಪು ಜೊತೆಗಿರುವ ಪೇಟಿಂಗ್‍ವೊಂದನ್ನು ತಮ್ಮ ಮನೆಯ ಗೋಡೆ ಮೇಲೆ ಹಾಕಿ ಅದರ ಫೋಟೋವನ್ನು ಸೊಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 

ಇದೀಗ ನಟ ಅರ್ಜುನ್ ಸರ್ಜಾ ಅವರು ಬಾಲ್ಯದಲ್ಲಿ ಅಪ್ಪು ಜೊತೆಗಿರುವ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅರ್ಜುನ್ ಸರ್ಜಾ ಅವರು ಪುನೀತ್ ರನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಫೋಟೋ ಜೊತೆಗೆ ಕೆಲವು ವಿಚಾರಗಳು ಮಾಸಿಹೋಗುವುದಿಲ್ಲ. ನನ್ನ ಪ್ರೀತಿಯ ಅಪ್ಪು ಎಂದೆಂದಿಗೂ ಶಾಶ್ವತ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟುಹಬ್ಬದಂದು ಪುನೀತ್ ರಾಜ್‍ಕುಮಾರ್ ಅವರ ಕನಸಿನ ಗಂಧದಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿತ್ತು. ಇನ್ನೂ ಈ ಟೀಸರ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

****

Written By
Kannadapichhar

Leave a Reply

Your email address will not be published. Required fields are marked *