ಅಭಿಮಾನಿಗಳ ಜೊತೆಗೆ ರೋರಿಂಗ್ ಸ್ಟಾರ್ ಕುಣಿದ್ರೆ ಪಿಚ್ಚರ್ ಹಿಟ್..!
ಕಳೆದ ವಾರವಷ್ಟೆ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಸಿನಿಮಾ ಮದಗಜ ರಿಲೀಸ್ ಆಗಿತ್ತು, ಉಮಾಪತರಿ ಶ್ರೀನಿವಾಸ್ ನಿರ್ಮಾಣದ ಸಿನಿಮಾ ಮೊದಲ ಮೂರೇ ದಿನಕ್ಕೆ ಭರ್ಜರಿ 20ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮಾಸ್ ಸಿನಿಮಾವಾದ್ರೂ, ಸೆಂಟಿಮೆಂಟ್ ಕಂಟೆಂಟ್ ಇಂದಾಗಿ ಕ್ಲಾಸ್ ಪ್ರೇಕ್ಷಕರನ್ನ, ಫ್ಯಾಮಿಲಿ ಆಡಿಯೆನ್ಸ್‌ನ ಥಿಯೇಟರ್‌ಗೆ ಕರೆದು ತರ್ತಾ ಇದ್ದಾನೆ ಮದಗಜ. ಶ್ರೀಮುರಳಿ ಕೂಡ ಮತ್ತೊಂದು ಗೆಲುವಿನ ಖುಷಿಯಲ್ಲಿ ಹೋದ ಕಡೆಯಲ್ಲ ಅಭಿಮಾನಿಗಳ ಜೊತೆಗೆ ಕೂನಿದು ಸಂಭ್ರಮಿಸ್ತಾ ಇದ್ದಾರೆ. ಶ್ರೀಮುರಳಿ ಅಭಿಮಾನಿಗಳ ಜೊತೆಗೆ ತಮಟೆ ಏಟಿಗೆ ಹೆಜ್ಜೆ ಹಾಕಿದ್ರು ಅಂದ್ರೆ ಸಿನಿಮಾ ಹಿಟ್ ಅಂತಲೇ..
ಈ ಹಿಂದೆ, ಶ್ರೀಮುರಳಿ ಕಮ್ ಬ್ಯಾಕ್ ಸಿನಿಮಾ ಅಂತಲೇ ಹೇಳಲಾಗೋ ಉಗ್ರಂ ಸಿನಿಮಾ ಭರ್ಜರಿ ಓಪನಿಂಗ್ ಪಡೆದಾಗ, 50 ದಿನಗಳನ್ನ ಕಂಪ್ಲೀಟ್ ಮಾಡಿದಾಗ ಶ್ರೀಮುರಳಿ ಅಭಿಮಾನಿಗಳ ಜೊತೆಗೆ ಥಿಯೇಟರ್ ಮುಂದೆಯೇ ಕುಣಿದು ಕುಪ್ಪಳಿಸಿದ್ರು. ನಂತ್ರ ರಿಲೀಸ್ ಆದ ಅವ್ರ ಮಫ್ತಿ ಹಾಗೂ ಭರಾಟೆ ಸಿನಿಮಾಗಳ ಭರ್ಜರಿ ಓಪನಿಂಗ್ ದಿನವೂ ಮುರಳಿ ಡ್ಯಾನ್ಸ್ ಮಾಡಿ ಸೆಲೆಬ್ರೇಟ್ ಮಾಡಿದ್ರು. ಮೊನ್ನೆ ಶುಕ್ರವಾರ ಕೂಡ ರೋರಿಂಗ್ ಸ್ಟಾರ್ ಥಿಯೇಟರ್ ಮುಂದೆ ಫ್ಯಾನ್ಸ್ ಜೊತೆ ಹೆಜ್ಜೆಹಾಕಿದ್ರು, ಈಗ ಸಿನಿಮಾ ಸಕ್ಸಸ್ ಜೊತೆ ಸುತ್ತಾಡ್ತಾ ಇರೋ ಶ್ರೀಮುರಳಿ ಹೋದಲೆಲ್ಲಾ ಅಭಿಮಾನಿಗಳ ಜೊತೆಗೆ ಡ್ಯಾನ್ಸ್ ಮಾಡ್ತಿದ್ದಾರೆ
ಅಭಿಮಾನಿಗಳೂ ಕೂಡ ಶ್ರೀಮುರಳಿ ಜೊತೆಗೆ ಸಿನಿಮಾ ರಿಲೀಸ್ ಆದ ದಿನ ಡ್ಯಾನ್ಸ್ ಮಾಡಲು ಕಾಯ್ತಾಇರ್ತಾರೆ. ತಾನೊಬ್ಬ ಹೀರೋ ಅನ್ನೋದನ್ನೂ ಮರೆತು ತಮ್ಮ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳ ಜೊತೆಗೆ ಕುಣೀದು ಸಂಭ್ರಮಿಸ್ತಾರೆ ಶ್ರೀಮುರಳಿ. ತಮ್ಮ ಚಿತ್ರದ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗೆ ಈ ರೀತಿಯಾಗಿ ಅಭಿನಂದನೆ ಸಲ್ಲಿಸ್ತಾರೆ ಮದಗಜ ಶ್ರೀಮುರಳಿ.
****