News

‘ಅಪ್ಪು’ ವನ್ನು ಕಣ್ತುಂಬಿಕೊಳ್ಳಲು ಇನ್ನು ಮೂರೇ ಅವಕಾಶಗಳು..!

‘ಅಪ್ಪು’ ವನ್ನು ಕಣ್ತುಂಬಿಕೊಳ್ಳಲು ಇನ್ನು ಮೂರೇ ಅವಕಾಶಗಳು..!
  • PublishedDecember 6, 2021

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರನ್ನು ನಾವು ಎಷ್ಟೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬುದು ಪ್ರತಿ ದಿನವೂ ಅವರ ನೆನೆಪು ಕಾಡುತ್ತಿರುವುದೆ ಸಾಕ್ಷಿ. ರಸ್ತೆಯಲ್ಲಿ ಹೋಗುವಾಗ ಕಣ್ಣು ಹಾಯಿಸಿದ ಕಡೆಯಲ್ಲಾ ಅಪ್ಪು ಭಾವಚಿತ್ರಗಳು, ವಾಟ್ಸಪ್ ಸ್ಟೇಟಸ್ ತೆರೆದರೆ ಅಲ್ಲೂ ಪುನೀತ್ ವೀಡಿಯೋಗಳು, ಯಾವುದೇ ಸಾಮಾಜಿಕ ಜಾಲತಾಣಗಳನ್ನು ತೆರೆದರೂ ಅವರು ಅಭಿನಯಿಸಿರುವ ಸಿನಿಮಾಗಳ ವೀಡಿಯೋ ತುಣುಕುಗಳೇ ಕಾಣಸಿಗುತ್ತವೆ. ಈ ತಲೆಮಾರು ಮಾಸುವವರೆಗೂ ಪುನೀತ್ ನೆನಪು ಮಾಸುವುದಿಲ್ಲವೇನೋ..?

ಆದರೆ ಅಪ್ಪು ಇಷ್ಟು ವರ್ಷ ರಾಜ್ಯದ ಜನತೆಯೊಂದಿಗೆ ಬೆರೆತಿರುವ ಹಲವು ಬಗ್ಗೆಯನ್ನು ರೀಪ್ಲೇಸ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅವರ ಅಭಿನಯ,ಡ್ಯಾನ್ಸ್,ಸ್ಟಂಟ್ಸ್ ಪ್ರತಿಯೊಂದರಲ್ಲೂ ಇದ್ದ ಡೆಡಿಕೇಶನ್, ಎಲ್ಲಕಿಂತ ಮಿಗಿಲಾಗಿ ಪುನೀತ್ ರಲ್ಲಿದ್ದ ಮುಗ್ದ ನಗು ನೆನಪಾದಾಗೆಲ್ಲಾ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.

ಇಂದು ಪುನೀತ್ ರಾಜಕುಮಾರ್ ಅವರ ಕನಸು ಅನಾವರಣಗೊಂಡಿದೆ ಪುನೀತ್​ ರಾಜ್​ಕುಮಾರ್​ ಅವರು ಕರುನಾಡಿನ ಪ್ರಕೃತಿ ಸೌಂದರ್ಯ ಮತ್ತು ವನ್ಯಜೀವಿಗಳ ಕುರಿತ ಸಾಕ್ಷ್ಯಚಿತ್ರದ ನಿರ್ಮಾಣದಲ್ಲಿ ಅಪಾರ ಆಸಕ್ತಿ ತೋರಿಸಿದ್ದರು. ಆದರೆ ಅದನ್ನು ಅಭಿಮಾನಿಗಳ ಮುಂದಿಡುವ ಮುನ್ನವೇ ಅವರು ಅಸುನೀಗಿದ್ದು ನೋವಿನ ಸಂಗತಿ. ಭೌತಿಕವಾಗಿ ಅವರ ಅನುಪಸ್ಥಿತಿಯಲ್ಲೇ ಇಂದು (ಡಿ.6) ‘ಗಂಧದ ಗುಡಿ’ ಡಾಕ್ಯುಮೆಂಟರಿಯ ಶೀರ್ಷಿಕೆ ಟೀಸರ್​ ಅನಾವರಣ ಆಗಿದೆ. ಪುನೀತ್​ ರಾಜ್​ಕುಮಾರ್​ ಅವರ ‘ಪಿಆರ್​ಕೆ ಆಡಿಯೋ’ ಮೂಲಕ ಟೈಟಲ್​ ಟೀಸರ್​ ರಿಲೀಸ್​ ಮಾಡಲಾಗಿದೆ. ಈ ದಿನಕ್ಕಾಗಿ ಅಪ್ಪು ಅಭಿಮಾನಿಗಳು ಕಾತರದಿಂದ ಕಾದಿದ್ದರು. ಟೈಟಲ್​ ಟೀಸರ್​ ನೋಡಿ ಎಲ್ಲರೂ ಖುಷಿಪಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇದು ವೈರಲ್​ ಆಗುತ್ತಿದೆ. ಈ ವೇಳೆ ಅಪ್ಪು ನಮ್ಮೊಂದಿಗೆ ಇರಬೇಕಿತ್ತು ಎಂದು ಎಲ್ಲರೂ ತೀವ್ರವಾಗಿ ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

ಅಪ್ಪು ವನ್ನು ಕೊನೆ ಮೂರು ಸಲ ಕಣ್ತುಂಬಿಕೊಳ್ಳಬಹುದು

ಪುನೀತ್ ರಾಜಕುಮಾರ್ ಅವರನ್ನ ಥಿಯೇಟರ್ ನಲ್ಲಿ ನೋಡಬಹುದು ಎಂದರೆ ಯಾರುತಾನೆ ಮಿಸ್ ಮಾಡಿಕೊಳ್ಳುತ್ತಾರೆ ಹೇಳಿ

ಅಪ್ಪು ಅವ್ರನ್ನ ನಾವೀಗ ಕೊನೆಯ ಮೂರು ಸಲ ಮಾತ್ರ ಥಿಯೇಟರ್ನಲ್ಲಿ ಕಣ್ತುಂಬಿಸಿಕೊಳ್ಳಬಹುದು, ಒಮ್ಮೆ “ಗಂಧದಗುಡಿ” ಎಂಬ ಡಾಕ್ಯುಮೆಂಟರಿಯ ಮೂಲಕ.. ಇನ್ನೊಮ್ಮೆ “ಜೇಮ್ಸ್” ಎಂಬ ಸಿನಿಮಾದ ಮೂಲಕ, ಮತ್ತೊಮ್ಮೆ  ಡಾರ್ಲಿಂಗ್ ಕೃಷ್ಣ ನಾಯಕನಟನಾಗಿ ಅಭಿನಯಿಸಿರುವ “ಲಕ್ಕಿಮ್ಯಾನ್” ಚಿತ್ರದಲ್ಲಿನ ಅತಿಥಿ ಪಾತ್ರದ ಮೂಲಕ !

ಈ ಮೂರರಲ್ಲಿ ಲಕ್ಕಿಮ್ಯಾನ್ ತುಂಬಾ ಭಾವನಾತ್ಮಕ ಅನಿಸಿಬಿಡುತ್ತದೆ ಯಾಕೆಂದರೆ ಅಲ್ಲಿ ಅವರದ್ದು ದೇವರ ಪಾತ್ರ ! ( ಇದು ತಮಿಳಿನ oh my kadavule ರಿಮೇಕ್) ಅವರನ್ನ ತೆರೆಯಮೇಲೆ ದೇವರಾಗಿ ನೋಡುವಾಗ…ಹೋದವರು ದೇವರಾಗಿ ಬಂದರೇನೊ ಅನಿಸಿಬಿಡುತ್ತದೆ..

ಒಟ್ಟಾರೆ  ಮೂರುಬಾರಿ ಜೋರಾಗಿ ಕೂಗಿಬಿಡೋಣ ” Star Star Power Star” ಎಂದು. ಜನ್ಮಕ್ಕೆ ಸಾಕಾಗುವಷ್ಟು.. ಯಾಕೆಂದರೆ ಮತ್ತೆಂದೂ ರಾಜಕುಮಾರ ತನ್ನ ಹೊಸ ಚಿತ್ರದ ಜೊತೆ ಚಿತ್ರಮಂದಿರಕ್ಕೆ ಬರಲಾರ.

‘ಅಪ್ಪು’ ವನ್ನು ಕಣ್ತುಂಬಿಕೊಳ್ಳಲು ಇನ್ನು ಮೂರೇ ಅವಕಾಶಗಳು, ಪುನೀತ್ ರಾಜಕುಮಾರ್ ಅವರನ್ನ ಥಿಯೇಟರ್ ನಲ್ಲಿ ನೋಡಬಹುದು ಎಂದರೆ ಯಾರುತಾನೆ ಮಿಸ್ ಮಾಡಿಕೊಳ್ಳುತ್ತಾರೆ ಹೇಳಿ.

****

Written By
Kannadapichhar

Leave a Reply

Your email address will not be published. Required fields are marked *