News

‘ಪುನೀತ್’ ಪುಣ್ಯ ಭೂಮಿಯಲ್ಲಿ ‘ಬನಾರಸ್’ ಚಿತ್ರದ ಪೋಸ್ಟರ್ ಲಾಂಚ್!

‘ಪುನೀತ್’ ಪುಣ್ಯ ಭೂಮಿಯಲ್ಲಿ ‘ಬನಾರಸ್’ ಚಿತ್ರದ ಪೋಸ್ಟರ್ ಲಾಂಚ್!
  • PublishedNovember 17, 2021

ಮಾಜಿ ಸಚಿವ ಜಮೀರ್ ಪುತ್ರ ಝೈದ್ ಖಾನ್ ಬನಾರಸ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದಾರೆ, ಈ ಚಿತ್ರವನ್ನು ಬೆಲ್​ ಬಾಟಂ’ ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆದ ನಿರ್ದೇಶಕ ಜಯತೀರ್ಥ ಅವರು ನಿರ್ದೇಶನ ಮಾಡಿದ್ದಾರೆ.. ಸೋನಲ್ ಮಂಥಾರಿಯಾ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಚಿತ್ರತಂಡ ಪೋಸ್ಟರ್ ಲಾಂಚ್ ಮಾಡಿದೆ. ಇಂದು (ನ.17) ಅಪ್ಪು ಸಮಾಧಿಗೆ ಹೂವಿನ ಹಾರ ಹಾಕಿ, ಪೋಟೋಗೆ ಪೂಜೆ ಸಲ್ಲಿಸಿ ಸಿನಿಮಾದ ಪೋಸ್ಟರ್​ನ ಲಾಂಚ್ ಮಾಡಿದೆ ಚಿತ್ರ ತಂಡ.

ಪುನೀತ್ ರಾಜ್ಕುಮಾರ್ ಸಮಾಧಿಗೆ ನಮನ ಸಲ್ಲಿಸಿ ಬನಾರಸ್ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿದೆ. ಬನಾರಸ್ ಸಿನಿಮಾದ ಪೋಸ್ಟರ್ ಲಾಂಚ್ ಅನ್ನು ಪುನೀತ್ ರಾಜ್​ಕುಮಾರ್ ಮಾಡಬೇಕಿತ್ತು. ಆದರೆ ಅಪ್ಪು ಆಗಲಿಕೆ ಕಾರಣದಿಂದ ಇದು ಸಾಧ್ಯವಾಗಿಲ್ಲ. ಇದೀಗ ಅಪ್ಪು ಅಗಲಿಕೆಯ ನಂತರ ಸಮಾಧಿ ಬಳಿ ಪೋಸ್ಟರ್ ಲಾಂಚ್ ಮಾಡಲಾಗಿದೆ. ಪೊಸ್ಟರ್ ಲಾಂಚ್​ನಲ್ಲಿ ನಿರ್ದೇಶಕ ಜಯತೀರ್ತ, ನಿರ್ದೇಶಕ ಎ ಹರ್ಷ, ಹಾಸ್ಯ ನಟ ಸುಜಯ್ ಶಾಸ್ತ್ರಿ ಭಾಗಿಯಾಗಿದ್ದರು.

ಪ್ರತಿಷ್ಠಿತ ಲಹರಿ ಮ್ಯೂಸಿಕ್​, ಟಿ-ಸಿರೀಸ್​ ಸಂಸ್ಥೆಗಳು ಜಂಟಿಯಾಗಿ ‘ಬನಾರಸ್​’ ಚಿತ್ರದ ಆಡಿಯೋ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿ ಮಾಡಿವೆ. ಇದು ಝೈದ್​ ಖಾನ್​ ಪಾಲಿಗೆ ಹೆಮ್ಮ ತರುವಂಥ ವಿಚಾರವಾಗಿದೆ.

ಬಹುಪಾಲು ಚಿತ್ರೀಕರಣ ಕಾಶಿಯಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ಮುಡಿಬರಲಿದೆ. ಎಲ್ಲ ಭಾಷೆಯ ಆಡಿಯೋ ಹಕ್ಕುಗಳು ಸೇಲ್​ ಆಗಿವೆ. ‘ಬನಾರಸ್​’ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *