ಕುಂಬಳಕಾಯಿ ಒಡೆದ ಪವನ್ ಒಡೆಯರ್ ಚಿತ್ರ ‘ರೆಮೋ’ ಡಿಸೆಂಬರ್ ಗೆ ಆಗಮನ!
ಪವನ್ ಒಡೆಯರ್ ನಿರ್ದೇಶನದ, ಸಿ.ಆರ್ ಮನೋಹರ್ ನಿರ್ಮಾಣದ ಅದ್ದೂರಿ ವೆಚ್ಚದ ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ ‘ರೆಮೋ’ ಈಗ ಚಿತ್ರೀಕರಣ ಮುಗಿಸಿ, ಕುಂಬಳಕಾಯಿ ಒಡೆದ ಖುಷಿಯಲ್ಲಿದೆ. ಚಿತ್ರ ಡಿಸೆಂಬರ್ ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಚಿತ್ರ ತಂಡ ಹೇಳಿದೆ.
ಈ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್ ಈಗ ಯಶಸ್ವಿಯಾಗಿ ಮುಗಿದಿದೆ. ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾವನ್ನು ಯಾವಾಗ ಸಿನಿಮಾ ಮಂದಿರಗಳಲ್ಲಿ ನೋಡುತ್ತೇವೋ ಅಂತ ಸಿನಿಪ್ರಿಯರು ಕಾಯುತ್ತಿದ್ದಾರೆ.ಎಲ್ಲದಕ್ಕಿಂತ ಹೆಚ್ಚಾಗಿ ಇದು ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮದಂತಹ ಅತ್ಯುತ್ತಮ ಚಿತ್ರಗಳನ್ನು ಕೊಟ್ಟಂತಹ ಪ್ರತಿಭಾನ್ವಿತ ನಿರ್ದೇಶಕ ಪವನ್ ಒಡೆಯರ್ ಅವರ ಸಿನಿಮಾ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ಚಿತ್ರದ ನಾಯಕನಾಗಿ ಇಶಾನ್ ಹಾಗೂ ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದು ‘ರೆಮೋ’ ಚಿತ್ರಕ್ಕೆ ವಿಶೇಷವಾದ ಸಂಗೀತ ನೀಡಿದ್ದಾರೆ ಮೆಲೋಡಿ ಮಾಂತ್ರಿಕ ಅರ್ಜುನ್ ಜನ್ಯಾ. ನೃತ್ಯ ಸಂಯೋಜನೆ ಇರ್ಮಾನ್ ಅವರದ್ದು. ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಚಿತ್ರ ಡಿಸೆಂಬರ್ ಕೊನೆಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.
****