ಭಜರಂಗಿ 2 ಹಬ್ಬ ‘ಮಾರಿ ಹಬ್ಬ’ದಂತೆ ಫೀಲ್ ಆಗ್ತಿದೆ ನಿರ್ದೇಶಕ ಮಹೇಶ್ ಕುಮಾರ್
ಕೊರೊನಾ ನಂತರ ಬಿಡುಗಡೆ ಆಗುತ್ತಿರುವ 3ನೇ ಬಿಗ್ ಬಜೆಟ್ ಚಿತ್ರಗಳಲ್ಲಿ ಒಂದಾದ ಭಜರಂಗಿ 2 ಇಂದು ಮುಂಜಾನೆ (ಅ29) ರಿಲೀಸ್ ಆಗಿ ಗುಡ್ ಓಪನಿಂಗ್ ಪಡೆದಿದೆ. ಇಡೀ ರಾತ್ರಿ ಚಿತ್ರಮಂದಿರಗಳ ಮುಂದೆ ಶಿವಣ್ಣ ಅಭಿಮಾನಿಗಳು ಕಾಯ್ದು ಫ್ಯಾನ್ಸ್ ಶೋ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕರಾದ ಎಸ್. ಮಹೇಶ್ ಕುಮಾರ್ ಅವರು ಕೂಡ ಬೆಳ್ಳಂ ಬೆಳಗ್ಗೆ 5 ಗಂಟೆಗೆ ಚಿತ್ರಮಂದಿರಕ್ಕೆ ಬಂದು ಶಿವಣ್ಣನ ಅಭಿಮಾನಿಯಾಗಿ ಸಿನಿಮಾವನ್ನ ವೀಕ್ಷಿಸಿದ್ದಾರೆ, ಇಂತಾಹದೊಂದು ಗ್ರಾಂಡ್ ಓಪನಿಂಗ್ ಸ್ಯಾಂಡಲ್ ವುಡ್ ಗೆ ಅವಶ್ಯಕವಾಗಿತ್ತು. ಇಂತಹ ಓಪನಿಂಗ್ ಸಿಗುತ್ತೆ ಎಂಬ ನಂಬಿಕೆ ಯಾರಿಗೂ ಇರಲಿಲ್ಲಾ, ಆದರೆ ಶಿವಣ್ಣ ಅಭಿಮಾನಿಗಳು ಅದನ್ನ ಸಾಧ್ಯವಾಗಿಸಿದ್ದಾರೆ.ಅಭಿಮಾನಿಗಳ ಸಂಭ್ರಮ ನೋಡ್ತಿದ್ರೆ ಮಾರಿ ಹಬ್ಬ ದ ರೀತಿ ಅನ್ನಸ್ತಿದೆ ಮುಂದೆ ಬರುವ ಎಲ್ಲಾ ಚಿತ್ರಗಳಿಗೂ ಇಂತಹದೇ ರೆಸ್ಪಾನ್ಸ್ ಸಿಕ್ಕರೆ ಇನ್ನಷ್ಟು ಉತ್ತಮ ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತವೆ ಎಂದರು.
ಎಸ್.ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ದವಾಗಿದ್ದು ಟ್ರೈಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.