News

‘ಸಲಗ’ ನಿಗೆ ಸಿಕ್ತು ಗುಡ್ ಓಪನಿಂಗ್ ಆದ್ರೆ ಕಣದಿಂದ ಹಿಂದೆ ಸರಿದ ‘ಕೋಟಿಗೊಬ್ಬ 3’ ನಾಳೆ ತೆರೆಗೆ..!

‘ಸಲಗ’ ನಿಗೆ ಸಿಕ್ತು ಗುಡ್ ಓಪನಿಂಗ್ ಆದ್ರೆ ಕಣದಿಂದ ಹಿಂದೆ ಸರಿದ ‘ಕೋಟಿಗೊಬ್ಬ 3’ ನಾಳೆ ತೆರೆಗೆ..!
  • PublishedOctober 14, 2021

ಇಂದು ಕನ್ನಡ ಚಿತ್ರಪ್ರೇಮಿಗಳಿಗೆ ಸಂಭ್ರಮದ ದಿನವಾಗಿತ್ತು. ಆಯುಧ ಪೂಜೆಯ ದಿನದಂದು ಕನ್ನಡದ ಎರಡು ಬಿಗ್ ಬಜೆಟ್ ಚಿತ್ರಗಳಾದ ‘ಕೋಟಿಗೊಬ್ಬ 3’ ಹಾಗೂ ‘ಸಲಗ’ ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಿಸಿದ್ದವು. ಬಹು ತಾರಾಗಣದ ಈ ಚಿತ್ರಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ‘ಸಲಗ’ ಚಿತ್ರಗಳನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಈ ಪೈಕಿ ‘ಸಲಗ’ ಮಾತ್ರ ಬಿಡುಗಡೆಯಾಗಿದ್ದು, ‘ಕೋಟಿಗೊಬ್ಬ 3’ ಅನಿವಾರ್ಯ ಕಾರಣದಿಂದ ನಾಳೆ ಬಿಡುಗಡೆಯಾಗಲಿದೆ.

ನಿರ್ಮಾಪಕ ಸೂರಪ್ಪ ಬಾಬು ಈ ಕುರಿತು ಮಾಹಿತಿ ನೀಡಿದ್ದು, ನಾಳೆ (ಶುಕ್ರವಾರ) ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಬಿಗ್​ ಸ್ಕ್ರೀನ್​ನಲ್ಲಿ ಕಿಚ್ಚನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಇತ್ತ ದುನಿಯಾ ವಿಜಯ್ ನಟನೆಯ ಸಲಗ ಫಸ್ಟ್ ಶೋ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

****

Written By
Kannadapichhar

Leave a Reply

Your email address will not be published. Required fields are marked *