News

ವಿಳಂಬವಾಗಿದೆ ಕೋಟಿಗೊಬ್ಬ 3 ಮೊದಲ ಪ್ರದರ್ಶನ..! ಅಭಿಮಾನಿಗಳಗೆ ನಿರಶನ..!

ವಿಳಂಬವಾಗಿದೆ ಕೋಟಿಗೊಬ್ಬ 3 ಮೊದಲ ಪ್ರದರ್ಶನ..! ಅಭಿಮಾನಿಗಳಗೆ ನಿರಶನ..!
  • PublishedOctober 14, 2021

ಬಹು ನಿರೀಕ್ಷಿತ ‘ಕೋಟಿಗೊಬ್ಬ 3’ ಸಿನಿಮಾ ನೋಡಲು ಬಂದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಾಗೂ ಸಿನಿರಸಿಕರಿಗೆ ನಿರಾಸೆಯಾಗಿದೆ. ‘ಕೋಟಿಗೊಬ್ಬ 3’ ಇಂದು ಬಿಡುಗಡೆಯಾಗಬೇಕಿತ್ತು. ಆದರೆ, ಸಿನಿಮಾ ಬಿಡುಗಡೆ ವಿಳಂಬವಾಗಿದೆ.

ಬೆಳಗ್ಗೆ 10 ಗಂಟೆಯಾದರೂ ಕೂಡ ಬೆಂಗಳೂರಿನ ಭೂಮಿಕಾ ಚಿತ್ರಮಂದಿರ ಸೇರಿಂದತೆ ಅನೇಕ ಚಿತ್ರಮಂದಿರಗಳ ಬಳಿ ಟಿಕೆಟ್ ಕೊಡದ ಕಾರಣ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವತ್ತು ‘ಕೋಟಿಗೊಬ್ಬ 3’ ಬಿಡುಗಡೆಯಾಗುವುದು ಡೌಟ್ ಎಂದು ಹೇಳಲಾಗುತ್ತಿದೆ. ಸಿನಿಮಾ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣಗೊಳ್ಳದ ಕಾರಣ ವಿಳಂಬವಾಗಿದೆ ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇನ್ನು ಬಹುದಿನಗಳ ನಂತರ ನೆಚ್ಚಿನ ನಟನ ಸಿನಿಮಾ ನೋಡಲು ಬಂದಿದ್ದ ಅಭಿಮಾನಿಗಳು ಸಿನಿಮಾ ಬಿಡುಗಡೆ ವಿಳಂಬವಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇವತ್ತೇ ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *