ಕ್ಯೂರಿಯಾಸಿಟಿ ಹುಟ್ಟಿಸಿದ ಕಾರ್ಗಲ್ ನೈಟ್ಸ್ ಟ್ರೈಲರ್..!
1990 ರ ದಶಕದಲ್ಲಿ ಕುಖ್ಯಾತ ಕಳ್ಳ ಸಾಗಾಣೆದಾರನೊಬ್ಬ ಪಶ್ಚಿಮ ಘಟ್ಟದಲ್ಲಿ ಅನಾಹುತ ಸೃಷ್ಟಿಸಿದ ನೈಜ ಘಟನೆಯನ್ನು ಆದರಿಸಿ ಮಾಡಿರುವ ಚಿತ್ರ ಕಾರ್ಗಲ್ ನೈಟ್ಸ್. ಇಂದು (ಅ.12) ಎ2 ಯೂಟ್ಯೂಬ್ ಚಾನೆಲ್ ನಲ್ಲಿ ಕಾರ್ಗಲ್ ನೈಟ್ಸ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇಡೀ ಟ್ರೈಲರ್ ಕುತೂಹಲ ಮೂಡಿಸಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿದೆ.
ದೇವರಾಜ್ ಪೂಜಾರಿ ನಿರ್ದೇಶನ ಮಾಡಿದ್ದು ಹರ್ಶಿಲ್ ಕೌಶಿಕ್ , ಕಿಶೋರ್, ಪ್ರಶಾಂತ್ ಸಿದ್ದಿ. ಲಾಸ್ಯ ನಾಗರಾಜ್, ಅಕ್ಷತಾ , ಸುಚನ್ ಶೆಟ್ಟಿ ಇನ್ನು ಮುಂತಾದವರು ತಾರಾ ಬಳಗದಲ್ಲಿದ್ದಾರೆ. ಟ್ರೈಲರ್ ನಲ್ಲಿ ಹೊಸ ಪ್ರತಿಭೆಗಳೆ ಹೆಚ್ಚಿನದಾಗಿ ಕಾಣಿಸಿಕೊಂಡರೂ ಅವರ ಅಭಿನಯ ಭರವಸೆ ಮೂಡಿಸುವಂತಿದೆ.
ಕಾಳಿಕಾ ಪ್ರೊಡಕ್ಷನ್ ಮತ್ತು ಓಂಕಾರ್ ಪ್ರೊಡಕ್ಷನ್ ನಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಸುರೇಂದ್ರನಾಥ್ ಬಿ.ಆರ್. , ಸಾಹಿತ್ಯ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಅವರು ಬರೆದಿದ್ದು, ವಿಜಯ ಪ್ರಕಾಶ, ವಾಸುಕಿ ವೈಭವ, ಶ್ವೇತ ಪ್ರಭು ಅವರ ಕಂಠ ಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ. DOP: ಅರುಣ್ ANR & ದೇವರಾಜ್ ಪೂಜಾರಿ , ಸಂಕಲನ ರೋಷನ್ ಲೋಕೇಶ್ ಮತ್ತು ಸಾಹಸ ನಿರ್ದೇಶನ ಚೇತನ್ ಡಿಸೋಜ ಅವರದ್ದು.
****