News

ಎಂಎಎ ಚುನಾವಣೆಯಲ್ಲಿ ‘ಪ್ರಕಾಶ್ ರೈ’ ಗೆ ಹಿನ್ನಡೆ

ಎಂಎಎ ಚುನಾವಣೆಯಲ್ಲಿ ‘ಪ್ರಕಾಶ್ ರೈ’ ಗೆ ಹಿನ್ನಡೆ
  • PublishedOctober 11, 2021

ತೆಲುಗು ಚಿತ್ರರಂಗದ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕನ್ನಡದವರಾದ ಪ್ರಕಾಶ್ ರೈ ಪರಾಭವಗೊಂಡಿದ್ದಾರೆ.

ತೆಲುಗಿನ ವಿಷ್ಣು ಮಂಚು ಎದುರು ಸ್ಪರ್ಧಿಸಿದ್ದ ಪ್ರಕಾಶ್ ರಾಜ್ ಗೆ ಸೋಲಾಗಿದೆ. ವಿಷ್ಣು ಬಳಗ 10 ಸ್ಥಾನ ಗೆದ್ದರೆ, ಪ್ರಕಾಶ್ ರಾಜ್ 8 ಸ್ಥಾನ ಗೆದ್ದಿದ್ದಾರೆ. ಈ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಇಬ್ಬರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಪ್ರಕಾಶ್ ರಾಜ್ ಮೂಲ ತೆಲುಗು ಕಲಾವಿದವರಲ್ಲ ಎನ್ನುವ ಕಾರಣಕ್ಕೆ ಅವರ ಸ್ಪರ್ಧೆಗೆ ವಿರೋಧವೂ ವ್ಯಕ್ತವಾಗಿತ್ತು.

ಹಾಗಿದ್ದರೂ ಸ್ಪರ್ಧಿಸಿದ್ದ ಪ್ರಕಾಶ್ ರಾಜ್ ಸೋತು ಮುಖಭಂಗ ಅನುಭವಿಸಿದ್ದಾರೆ. ‘ಮಾ’ದಲ್ಲಿ ಕೆಲಸ ಸರಿಯಾಗಿ ಆಗುತ್ತಿಲ್ಲ. ಸರಿ ಮಾಡಲು ನಾನು ಅಧ‍್ಯಕ್ಷನಾಗಬೇಕು ಎಂದು ಪ್ರಕಾಶ್ ರಾಜ್ ಪ್ರತಿಪಾದಿಸುತ್ತಿದ್ದರು.

****

Written By
Kannadapichhar

Leave a Reply

Your email address will not be published. Required fields are marked *