‘ನಿನ್ನ ಸನಿಹಕೆ’ ಪ್ರಿಮಿಯರ್ ಶೋನಲ್ಲಿ ದೊಡ್ಮನೆ ಕುಟುಂಬ ಮತ್ತು ಇಡೀ ಚಿತ್ರರಂಗ..!
ಕನ್ನಡಿಗರ ಕಣ್ಮಣಿ ವರನಟ ಡಾ.ರಾಜ್ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಯಕಿಯಾಗಿ, ಸೂರಜ್ ನಾಯಕನಾಗಿ ಅಭಿನಯಿಸಿರುವ ಚಿತ್ರ ‘ನಿನ್ನ ಸನಿಹಕೆ’ ಅ.8 ಕ್ಕೆ ರಾಜಾದ್ಯಂತ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಸಿನಿ ಪ್ರೀಯರಿಗೆ ಇಷ್ಟವಾಗಿದ್ದು ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ.
ಪ್ರಿಮಿಯರ್ ಶೋ ವೀಕ್ಷಿಸಲಿರುವ ರಾಜ್ ಕುಟುಂಬ
ನಿನ್ನ ಸನಿಹಕೆ ಚಿತ್ರ ಅಕ್ಟೋಬರ್ 8ಕ್ಕೆ ರಿಲೀಸ್ ಆಗುತ್ತಿದ್ದು ಅದರ ಹಿಂದಿನ ದಿನ (ಅ.7) ‘ನಿನ್ನಸನಿಹಕೆ’ ಚಿತ್ರದ ಪ್ರಿಮಿಯರ್ ಶೋ ನಡೆಸಲು ಚಿತ್ರ ತಂಡ ನಿರ್ಧರಿಸಿದೆ ಈ ಶೋ ನ ಮತ್ತೊಂದು ವಿಶೇಷ ಏನೆಂದರೆ ದೊಡ್ಮನೆ ಕುಟುಂಬದ ಎಲ್ಲಾ ಸದಸ್ಯರು ಮತ್ತು ಇಡೀ ಚಿತ್ರ ರಂಗ ನಿನ್ನ ಸನಿಹಕೆ ಚಿತ್ರದ ಪ್ರಿಮಿಯರ್ ಶೋವನ್ನು ವೀಕ್ಷಿಸುತ್ತಿದೆ. ಶಿವಣ್ಣ, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್, ಯುವರಾಜ್ ಕುಮಾರ್, ಶ್ರೀಮುರಳಿ, ವಿಜಯ್ ರಾಘವೇಂದ್ರ ರಾಮ್ ಕುಮಾರ್ , ಧಿರೇನ್ ಸೇರಿದಂತೆ ಉದ್ಯಮ ದೊಡ್ಡ ಸ್ಟಾರ್ಸ್ ಪ್ರಿಮಿಯರ್ ಶೋಗೆ ಬರಲಿದ್ದಾರೆ.
ತಲೈವಾ ರಜನಿಕಾಂತ್ ಕೂಡ ಧನ್ಯಾರಾಮ್ ಕುಮಾರ್ ಅಭಿನಯದ ‘ನಿನ್ನ ಸನಿಹಕೆ’ ಸಿನಿಮಾ ನೋಡಲು ಆಸೆ ಪಟ್ಟಿದ್ದು ಅವರಿಗೆ ಚೆನೈನಲ್ಲೆ ಸಿನಿಮಾ ತೋರಿಸುವ ವ್ಯವಸ್ಥೆಯನ್ನು ಕೂಡ ಚಿತ್ರ ತಂಡ ಮಾಡುತ್ತಿದೆ
ಚಿತ್ರವನ್ನು ವೈಟ್ & ಗ್ರೇ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ಕೊಡ್ಲಿ ರವರು ನಿರ್ಮಿಸಿದ್ದಾರೆ.ನಾಯಕ ಸೂರಜ್ ಅವರೇ ಈ ಚಿತ್ರದ ಕಥೆ , ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ, ರಘುದೀಕ್ಷಿತ್ ಸಂಗೀತ ಸಂಯೋಜನೆ ಮಾಡಿದ್ದಾರೆ.
****